Wednesday, January 22, 2025

ನಟಿ ರಮ್ಯಾ ಅನಾರೋಗ್ಯದಿಂದ ಸಾವು : ತಮಿಳು ಚಾನಲ್​ ಗಳಲ್ಲಿ ವೈರಲ್​!

ಬೆಂಗಳೂರು : ಸ್ಯಾಂಡಲ್​​ವುಡ್ ತಾರೆ ರಮ್ಯಾ ಅನಾರೋಗ್ಯದಿಂದ ಸಾವಿಗೀಡಾಗಿರುವ ಕುರಿತ ಸುದ್ದಿಗಳನ್ನು ತಮಿಳುನಾಡಿನ ಚಾನಲ್​ ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳಿಗೆ ಶಾಕ್​ ನೀಡಿದೆ.

ಮಾಜಿ ಸಂಸದೆ, ನಟಿ ರಮ್ಯಾಗೆ ಹೃದಯಾಘಾತ ಎಂದು ತಮಿಳಿನ ತಂತಿ, ತಮಿಳ್​ 24/7 ಚಾಲನ್​ಗಳಲ್ಲಿ  ಸುದ್ದಿ ಪ್ರಸಾರವಾಗುತ್ತಿದೆ. ದಿವ್ಯ ಸ್ಪಂದನಾ ಕುರಿತ ಸುದ್ದಿ ಪ್ರಸಾರದಿಂದ ಅಭಿಮಾನಿಗಳಿಗೆ ಶಾಕ್​​ ಆಗಿದ್ದು ಈ ಸುದ್ದಿ ನಿಜಾನಾ ಅಥವಾ ಸುಳ್ಳಾ ಎಂಬ ಗೊಂದಲದಲ್ಲಿ ಫ್ಯಾನ್ಸ್​ಗಳಿಗೆ ತಲೆಬಿಸಿಯಾಗಿದೆ.​

ನಟಿ ರಮ್ಯಾ ಸಾವಿನ ಕುರಿತ ಸುದ್ದಿ ಎಸ್​ಎಸ್ ಮ್ಯೂಸಿಕ್​, ಫಿಲ್ಮಿ ಫೋಕಸ್ ಎಕ್ಸ್​​ ಪೇಜ್​​ನ ಟ್ವೀಟ್ ನಲ್ಲಿ ಹರಿದಾಡುತ್ತಿದ್ದು, ಈ ಸುದ್ದಿ ಕಿಡಿಗೇಡಿಗಳು ಹಬ್ಬಿಸಿದ ಸುದ್ದಿಯಾಗಿರಲಿ ಎಂದು ರಮ್ಯಾ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ರಮ್ಯಾ ಕ್ಷೇಮವಾಗಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ರಮ್ಯಾ ಸೇಫ್​!

ಇದೇ ವೇಳೆ, ನಟಿ ರಮ್ಯಾ ಅನಾರೋಗ್ಯ ಮತ್ತು ಸಾವಿನ ಕುರಿತು ಟ್ವೀಟ್​ ಮಾಡಿರುವ ರಮ್ಯಾ ಗೆಳತಿ ಚಿತ್ರಾ ಸುಬ್ರಹ್ಮಣ್ಯಂ,  ನಾನು ಕಳೆದ ರಾತ್ರಿ ರಮ್ಯಾರನ್ನ ಭೇಟಿ ಮಾಡಿದ್ದೆ, ಜಿನೀವಾದಲ್ಲಿ ಕಳೆದ ರಾತ್ರಿ ಇಬ್ಬರು ಭೋಜನಕೂಟದಲ್ಲಿ ಭಾಗಿಯಾಗಿದ್ವಿ ಅವರನ್ನು ಭೇಟಿಯಾದದ್ದು ಖುಷಿಯ ಅನುಭವ ಇಂದು ಬೆಳಗ್ಗೆಯೂ ರಮ್ಯಾರೊಂದಿಗೆ ಮಾತನಾಡಿದ್ದೇನೆ, ರಮ್ಯಾ ನಾಳೆ ಜಿನೀವಾದಿಂದ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಟ್ವೀಟ್ ಮಾಡಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

 

RELATED ARTICLES

Related Articles

TRENDING ARTICLES