Sunday, December 22, 2024

ನಟ ವಿಜಯ್​ ದೇವರಕೊಂಡರಿಂದ ಬಡ ಕುಟುಂಬಗಳಿಗೆ 1ಕೋಟಿ ರೂ. ದಾನ!

ವಿಶಾಕಪಟ್ಟಣ : ತೆರೆಯ ಮೇಲೆ ಅದ್ಭುತವಾಗಿ ನಟಿಸಿ ಪ್ರೇಕ್ಷಕರನ್ನು ಮೋಡಿ ಮಾಡುವ ವಿಜಯ್ ದೇವರಕೊಂಡ ರೀಲ್ ಮಾತ್ರವಲ್ಲ, ರಿಯಲ್ ಜೀವನದಲ್ಲಿಯೂ ಹೀರೋ ಎಂದು ಸಾಬೀತು ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ ಒಂದು ವಾರ ಮಳೆ ಸಾಧ್ಯತೆ !

ತಮ್ಮ ನಟನೆಯ ಖುಷಿ ಸಿನಿಮಾದಿಂದ ಸಿಗುವ 1 ಕೋಟಿ ರೂ. ಹಣವನ್ನು ಬಡವರಿಗೆ ನಿಡುವುದಾಗಿ ಘೋಷಿಸಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಕಾಯಕ್ರಮವೊಂದರಲ್ಲಿ ಮಾತನಾಡಿ, ‘ಖುಷಿ’ ಚಿತ್ರ ಗಳಿಕೆಯಲ್ಲಿ 1 ಕೋಟಿ ರೂ. ಹಣವನ್ನು ಬಡ ಕುಟುಂಬಗಳಿಗೆ ಹಂಚಲಾಗುವುದು.

ಅರ್ಹ 100 ‘ದೇವರ ಕುಟುಂಬ’ ಗಳಿಗೆ ತಲಾ 1 ಲಕ್ಷ ರೂ. ಹಣವನ್ನು ಚೆಕ್ ಮೂಲಕ ವಿತರಿಸಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅರ್ಜಿ ಹರಿ ಬಿಟ್ಟು, ಆಯ್ಕೆಯಾಗುವ ಅರ್ಹ ಕುಟುಂಬಗಳಿಗೆ ವಾರದೊಳಗೆ ಹಣ ವಿತರಿಸಲಾಗುವುದು ಎಂದಿದ್ದಾರೆ. ಈ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

RELATED ARTICLES

Related Articles

TRENDING ARTICLES