Monday, December 23, 2024

ಉದಯನಿಧಿ ತಲೆ ತಂದವರಿಗೆ 10ಕೋಟಿ ಘೋಷಿಸಿದ ಸ್ವಾಮೀಜಿ!

ಅಯೋಧ್ಯೆ : ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಪುತ್ರ ಯುವನಿಧಿ ಸ್ಟಾಲಿನ್​ ಸನಾತನಧರ್ಮ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬೆನ್ನಲ್ಲೇ ಹಲವು ಹಿಂದು ಸ್ವಾಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯ ಸ್ವಾಮಿಜಿಯೊಬ್ಬರು ಉದಯ್​ನಿಧಿ ಸ್ಟಾಲಿನ್​ಗೆ ಜೀವ ಬೆದರಿಕೆ ಹಾಕಿದ್ದಾರೆ.

ಅಯೋಧ್ಯೆಯ ತಪಸ್ವಿ ಛವನಿ ದೇವಸ್ಥಾನದ ಮುಖ್ಯ ಅರ್ಚಕರಾಗಿರುವ ಪರಮಹಂಸ ಆಚಾರ್ಯ ಸ್ವಾಮೀಜಿ ಅವರೇ ಉದಯನಿಧಿಗೆ ಜೀವ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ಸನಾತನಧರ್ಮ ಕುರಿತು ವಿವಾದಾತ್ಮಕ ಹೇಳಿಕೆ: ಉದಯನಿಧಿ ವಿರುದ್ಧ ಕೋರ್ಟ್‌ಗೆ ದೂರು !

ಉದಯನಿಧಿ ಸ್ಟಾಲಿನ್ ಹೇಳಿಕೆ ಹಿಂದೂ ಧರ್ಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಅವರ ತಲೆ ಕೆಡಿದು ತಂದು ಕೊಟ್ಟವರಿಗೆ  10 ಕೋಟಿ ಕೊಡುತ್ತೇನೆ. ಇಲ್ಲದಿದ್ದರೆ, ನಾನೇ ಅವನನ್ನು ಹುಡುಕಿ ಕೊಲ್ಲುತ್ತೇನೆ  ಎಂದು ಪರಮಹಂಸ ಆಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಈ ಸ್ವಾಮೀಜಿ ಈ ಹಿಂದೆಯೂ ಕೂಡ ವಿವಾದಿತ ಹೇಳಿಕೆ ನೀಡಿದ್ದರು. ಪಠಾಣ್‌ ಚಿತ್ರಕ್ಕೆ ಸಂಬಂಧಿಸಿದಂತೆ ನಟ ಶಾರುಕ್ ಖಾನ್ ಅವರನ್ನು ಜೀವಂತ ಸುಡುತ್ತೇನೆ ಎಂದು ಹೇಳಿದ್ದರು.

RELATED ARTICLES

Related Articles

TRENDING ARTICLES