ಬೆಂಗಳೂರು : ರೇಷನ್ ಕಾರ್ಡ್ ತಿದ್ದುಪಡಿದಾರರಿಗೆ ಆಹಾರ ಇಲಾಖೆ ಗುಡ್‌ನ್ಯೂಸ್ ಕೊಟ್ಟಿದೆ. ಹೆಚ್ಚುವರಿ ಫಲಾನುಭವಿಗಳ ಸೇರ್ಪಡೆಗೆ ಕಾಲಾವಕಾಶ ನೀಡಿ ಸರ್ಕಾರದಿಂದಲೇ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ: ಶೇ 70% ಮಹಿಳೆಯರಿಗೆ ಸಿಕ್ಕಿಲ್ಲ ಲಕ್ಷ್ಮಿ ಭಾಗ್ಯ !
ಪಡಿತರ ಚೀಟಿ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಸೇರ್ಪಡೆಗೆ ಆಹಾರ ಇಲಾಖೆ ಕಾಲಾವಕಾಶ ನೀಡಿದೆ. ಜಿಲ್ಲಾವಾರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ನಗರ ಹಾಗೂ ಜಿಲ್ಲಾ ಭಾಗದಲ್ಲಿ ಸೆಪ್ಟೆಂಬರ್ 9ರಿಂದ 11ರವರೆಗೆ ಅವಕಾಶ ನೀಡಲಾಗಿದೆ.
ಅಷ್ಟೇ ಅಲ್ಲ, ಬೆಳಗಾವಿ ಹಾಗೂ ಮೈಸೂರು ಭಾಗದಲ್ಲಿ ಸೆಪ್ಟೆಂಬರ್ 12ರಿಂದ 14ರವರೆಗೆ ಕಾಲಾವಕಾಶ ಕೊಡಲಾಗಿದೆ. ಇನ್ನು ಕಲಬುರಗಿ ಭಾಗದಲ್ಲಿ ಸೆಪ್ಟೆಂಬರ್ 6ರಿಂದ 8ರವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕೊಡಲಾಗ್ತಿದ್ದು, ತಿದ್ದುಪಡಿ ಹಾಗೂ ಹೊಸದಾಗಿ ಹೆಸರು ಸೇರ್ಪಡೆಗೆ ಮಾತ್ರ ಅವಕಾಶ ಕೊಡಲಾಗ್ತಿದೆ.