Thursday, December 19, 2024

ಕೃಷ್ಣ ಜನ್ಮಾಷ್ಟಮಿ ; ಕೃಷ್ಣನ ಮೂರ್ತಿಗಳಿಗೆ ಡಿಮ್ಯಾಂಡಪೋ ಡಿಮ್ಯಾಂಡ್…!

ಬೆಂಗಳೂರು : ಕೃಷ್ಣಾ ಜನ್ಮಾಷ್ಟಮಿ ಹಿನ್ನೆಲೆ ನಗರದಲ್ಲಿ ಕೃಷ್ಣನ ವಿಗ್ರಹಗಳಿಗಾಗಿ ಭಾರಿ ಬೇಡಿಕೆ ಕಂಡುಬರುತ್ತಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ಎಂದು ಆಚರಿಸುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದೇ ರೀತಿಯಲ್ಲಿ ನಾಳೆ ಕೃಷ್ಣ ಜನ್ಮಾಷ್ಟಮಿ ಇರುವ ಹಿನ್ನೆಲೆ ಸಿಲಿಕಾನ್ ಸಿಟಿಯ ಮಾರುಕಟ್ಟೆ ಮತ್ತು ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿರುವ ಕೃಷ್ಣಾವತಾರಗಳು.

ಆದ್ದರಿಂದ ಮಾರುಕಟ್ಟೆಗಳಲ್ಲಿ ಬಾಲಕೃಷ್ಣ, ಬೆಣ್ಣೆ ಕೃಷ್ಣ, ರಾಧಾ ಕೃಷ್ಣ ಹಾಗೂ ತುಂಟಾಟಗಳನ್ನು ಒಳಗೊಂಡ ಕೃಷ್ಣನ ಮೂರ್ತಿಗಳನ್ನು ಕೊಂಡುಕೊಳ್ಳುವುದರಲ್ಲಿ ನಗರದ ಜನರು ಪುಲ್ ಬ್ಯೂಸಿಯಾಗಿದ್ದಾರೆ.

ಇದನ್ನು ಓದಿ : ಇಂದು 6 ರಾಜ್ಯಗಳಲ್ಲಿ ವಿಧಾನಸಭಾ ಉಪಚುನಾವಣೆ: ಮತದಾನ ಆರಂಭ !

ಅಷ್ಟೇ ಅಲ್ಲದೆ 100 ಮತ್ತು 15000 ರೂಪಾಯಿವರೆಗೆ ಕೃಷ್ಣನಾ ಮೂರ್ತಿಗಳು ಮಾರಾಟ ಆಗುತ್ತಿದೆ. ಆದರೂ ಸಹ ಮುದ್ದು ಕೃಷ್ಣನ ಅವಾತಾರ ಮೂರ್ತಿಗಳನ್ನು ನೋಡಿ ಮನಸೋತ ಜನ ಎಷ್ಟೇ ದುಡ್ಡು ಆದರೂ ಕೊಂಡುಕೊಳ್ಳುತ್ತಿರುವ ಸಿಲಿಕಾನ್ ಸಿಟಿಯ ಮಂದಿ.

RELATED ARTICLES

Related Articles

TRENDING ARTICLES