ಬೆಂಗಳೂರು : ಡೇ ಬೈ ಡೇ.. ಬಿಜೆಪಿ ಅದೋಗತಿಗೆ ಸಿಲುಕುತ್ತಿದೆ ಎಂದು ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗೀಶ್ ಶೆಟ್ಟರ್ ಗುಡುಗಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಡಾ.ಬಿ.ಎಸ್ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು ಮಾತ್ರವಲ್ಲ. ಓವರಾಲ್ ಅನೇಕ ಸಮಸ್ಯೆ ಅಲ್ಲಿದೆ ಎಂದು ಕುಟುಕಿದರು.
ಜಿಲ್ಲೆಗಳಲ್ಲಿ ಪ್ರವಾಸ ಹೋದಾಗ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಆದ ಕಾರ್ಯಕ್ರಮ ಸ್ವಾಗತ ಮಾಡ್ತಿದ್ದಾರೆ. ಕಾಂಗ್ರೆಸ್ನಲ್ಲಿ 12 ರಿಂದ 15 ಸ್ಥಾನ ಜಯಭೇರಿ ಭಾರಿಸಲಿದೆ. ಅಸೆಂಬ್ಲಿ ಚುನಾವಣೆಯಲ್ಲಿ ಕೂಡ ಹೇಳಿದ್ದೆ. 130 ರಿಂದ 135 ಸ್ಥಾನ ಬರಲಿದೆ ಅಂತ. ಇಂದಿನ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ನೋಡಿದ್ರೆ, 15 ರಿಂದ 20 ಸ್ಥಾನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವರು, ಶಾಸಕರು ಬರ್ತಾರೆ
ಲಿಂಗಾಯತ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಬಹಳಷ್ಟು ಬಾರಿ ಹೇಳಿದ್ದೇನೆ. ಬಿಜೆಪಿಯಲ್ಲಿ ಆಕ್ರೋಶ ಇದೆ. ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗಿಲ್ಲ. ಎಷ್ಟೋ ಜನ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತಿದ್ದಾರೆ. ಬಹಳ ಜನ ನನ್ನ ಜೊತೆ ಕೂಡ ಚರ್ಚೆ ಮಾಡಿದ್ದಾರೆ. ಮಾಜಿ ಸಚಿವರು ನನ್ನ ಜೊತೆ ಮಾತನಾಡಿದ್ದಾರೆ. ಮಾಜಿ ಶಾಸಕರು ಕೂಡ ಮಾತನಾಡಿದ್ದಾರೆ ಎಂದು ಹೊಸ ಬಾಂಬದ ಸಿಡಿಸಿದ್ದಾರೆ.
ಬಸವರಾಜ ರಾಯರೆಡ್ಡಿ ಪತ್ರ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರು ನಿರ್ಧಾರ ಮಾಡ್ತಾರೆ, ನಾವಲ್ಲ ಎಂದು ಜಗದೀಶ್ ಶೆಟ್ಟರ್ ಜಾಣ್ಮೆಯ ಉತ್ತರ ನೀಡಿದರು.