Wednesday, January 22, 2025

ಗೃಹಲಕ್ಷ್ಮಿ: ಶೇ 70% ಮಹಿಳೆಯರಿಗೆ ಸಿಕ್ಕಿಲ್ಲ ಲಕ್ಷ್ಮಿ ಭಾಗ್ಯ !

ಬೆಂಗಳೂರು : ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆ  ಅನುಷ್ಠಾನವಾದರೂ ಶೇಖಡ 70% ಜನೆತೆಯ ಖಾತೆಗೆ ಜಮೆ ಆಗದ ಹಣ.

ಕಾಂಗ್ರೆಸ್​ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಕಳೆದ ವಾರವಷ್ಟೆ ಮೈಸೂರಿನಲ್ಲಿ ಚಾಲನೆ ಸಿಕ್ಕಿತ್ತು. ಈ ಕಾರ್ಯಕ್ರಮಕ್ಕೆ ರಾಹುಲ್​ ಗಾಂಧಿ ಚಾಲನೆ ನೀಡಿದ್ದರು. ಈ ಯೋಜನೆಯ ಬಳಿಕ ರಾಜ್ಯದ ಎಲ್ಲಾ 1.10 ಕೋಟಿ ಮನೆಯೊಡತಿಯರ ಖಾತೆಗೆ 2000 ಸಾವಿರ ಹಣ ಜಮೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಇದನ್ನೂ ಓದಿ: ಸನಾತನಧರ್ಮ ಕುರಿತು ವಿವಾದಾತ್ಮಕ ಹೇಳಿಕೆ: ಉದಯನಿಧಿ ವಿರುದ್ಧ ಕೋರ್ಟ್‌ಗೆ ದೂರು !

ಆದರೇ, ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರು ರಾಜ್ಯದ ಸಂಪೂರ್ಣ ಜನತೆಯ ಖಾತೆಗೆ ಯಾವುದೇ ಹಣ ಜಮೆಯಾಗಿಲ್ಲ, ಶೇ.70ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಭಾಗ್ಯ ಸಿಕ್ಕಿಲ್ಲ. ಬ್ಯಾಂಕ್ ಖಾತೆ ಹೊಂದಾಣಿಕೆ, ವೆರಿಫಿಕೇಷನ್ ಆಗಿಲ್ಲ, ದಾಖಲೆಗಳ ಪರಿಶೀಲನೆ ಬಾಕಿ ನೆಪದಲ್ಲಿ ಗೃಹಲಕ್ಷ್ಮಿಗೆ ತಡೆ ನೀಡಲಾಗಿದೆ ಎನ್ನಲಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆ ಸಮರ್ಪಕವಾಗಿ ಅನುಷ್ಟಾನ ಸಮರ್ಪಕವಾಗಿ ನಿರ್ವಹಿಸದ  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಾಜ್ಯದ ಹಲವೆಡೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES