Friday, November 22, 2024

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸದ್ದು ಮಾಡುತ್ತಿರುವ ಡೆಂಗ್ಯೂ

ಬೆಂಗಳೂರು : ನಗರದಲ್ಲಿ ಮತ್ತೆ ಡೆಂಗ್ಯೂ ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಅದನ್ನು ಹತೋಟಿಗೆ ತರಲು ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.

ವಾತವರಣದಲ್ಲಿ ಆಗುತ್ತಿರುವ ಬದಲಾವಣೆಯ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ 2023 ರಲ್ಲಿ ಈ ವರೆಗೂ 6,706 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ರಾಜ್ಯ ರಾಜಧಾನಿಯಲ್ಲಿ 3454 ಜನರಿಗೆ ಕಾಡುತ್ತಿರುವ ಡೆಂಗ್ಯೂ ಜ್ಚರ.

ಇದನ್ನು ಓದಿ : ಕೃಷ್ಣ ಜನ್ಮಾಷ್ಟಮಿ ; ಕೃಷ್ಣನ ಮೂರ್ತಿಗಳಿಗೆ ಡಿಮ್ಯಾಂಡಪೋ ಡಿಮ್ಯಾಂಡ್…!

ಈ ಪರಿಣಾಮ ಡೆಂಗ್ಯೂ ಪ್ರಕರಣಗಳು ನಗರದಲ್ಲಿ ದಿಢೀರ್ ಏರಿಕೆಯಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಳ್ಳುತ್ತಿರುವ ಆರೋಗ್ಯ ಇಲಾಖೆ.  ಅದಕ್ಕಾಗಿ ಪರಿಸ್ಥಿತಿ ಕೈ ಮೀರುವ ಮುನ್ನವೇ ಅದನ್ನು ಹತೋಟಿಗೆ ತರಲು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.

ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲು ಮುಂದಾದ ಇಲಾಖೆ.

ಅಧಿಕಾರಿಗಳ ಸೂಚನೆ ಮೇರೆಗೆ ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥವಿಕ ಕೇಂದ್ರಗಳಲ್ಲಿ ಹೆಚ್ಚಿನ ನಿಗವಹಿಸುತ್ತಿರುವ ವೈದ್ಯರು. ಅಷ್ಟೇ ಅಲ್ಲದೆ ಈಗಾಗಲೇ ಮನೆ ಮನೆಗಳಿಗೆ ಡೆಂಗ್ಯೂ ಕುರಿತು ಎಚ್ಚರಿಕೆ ಮೂಡಿಸುತ್ತಿರುವ ದಾದಿಯರು ಹಾಗೂ ಆಶಾ ಕಾರ್ಯಕರ್ತೆರು

RELATED ARTICLES

Related Articles

TRENDING ARTICLES