Monday, December 23, 2024

ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದ ದಸರಾ ವೈಭವ

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಶುರುವಾಗುತ್ತಿರುವ ಹಿನ್ನಲೆ ಮೆರವಣಿಗೆ ಮೂಲಕ ಅರಮನೆಗೆ ತೆರಳಲಿರುವ ಗಜಪಡೆಗಳು.

ಸಾಂಸ್ಕ್ರತಿಕ ನಗರಿಯಲ್ಲಿ 2023 ರ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆರಂಭವಾಗುತ್ತಿರುವ ಹಿನ್ನೆಲೆ ನಾಳೆ ಮಧ್ಯಾಹ್ನ 12.01 ರಿಂದ  12.51 ರೊಳಗೆ ಅರಮನೆಗೆ ಎಂಟ್ರಿ ಕೊಡಲಿರುವ ಗಜಪಡೆಗೆ, ಅರಮನೆ ಮಂಡಳಿ ವತಿಯಿಂದ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕಾಗಿ ಮೈಸೂರಿನ ಅಶೋಕಪುರಂನ ಅರಣ್ಯಭವನದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳನ್ನು ಕರೆಸಲಾಗುತ್ತಿದೆ. ಬಳಿಕ ಅಭಿಜಿನ್ ಲಗ್ನದ ಸಮಯದಲ್ಲಿ ಈ ಪೂಜೆ ನಡೆಯಲಿದ್ದು, ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಮಾಡಲಾಗುತ್ತದೆ.

ಇದನ್ನು ಓದಿ : ಭಾರತೀಯ ಆಟಗಾರರಿಗೆ ಗೌತಮ್​ ಗಂಭೀರ್ ವಾರ್ನಿಂಗ್​​!

ಆದ್ದರಿಂದ ನಾಳೆ ಬೆಳಗ್ಗೆ ಅರಣ್ಯ ಭವನದಿಂದ ಮೆರವಣಿಗೆ ಮೂಲಕ ಕಾಲ್ನಡಿಗೆಯಲ್ಲಿ ಅರಮನೆಗೆ ತೆರಳಲಿರುವ ಗಜಪಡೆಗಳು. ಅದಲ್ಲದೆ ಈ ಗಜಪಡೆಗಳ ಸ್ವಾಗತ ಕಾರ್ಯಕ್ರಮವನ್ನು ಸಿಎಂ ಸಿದ್ಧರಾಮಯ್ಯ ರವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ ಮಹದೇವಪ್ಪರಿಂದ ಚಾಲನೆ ನೀಡಲಾಗುತ್ತಿದೆ.

RELATED ARTICLES

Related Articles

TRENDING ARTICLES