ಬೆಂಗಳೂರು : ಓರ್ವ ವ್ಯಕ್ತಿ ಅನ್ನಕೊಟ್ಟ ಮನೆಯಲ್ಲಿಯೇ ಕನ್ನ ಹಾಕಿದ್ದ ಹಿನ್ನೆಲೆ ಸಿಕ್ಕಿ ಬೀಳೋ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಲಿಕೇಶಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇರಳ ಮೂಲದವನಾಗಿದ್ದ ಜೀಮೊನ್ ವರ್ಗೀಸ್ ಎಂಬ ವ್ಯಕ್ತಿಯು ನಗರದ ಮನೆಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಇದರ ಬೆನ್ನಲ್ಲೇ ಒಂದು ದಿನ ಹಣಕ್ಕೆ ಆಸೆ ಬಿದ್ದು, ಮಾಲಕಿ ಮನೆಯಲ್ಲಿಯೇ ಆಭರಣಗಳ ಕಳ್ಳತನ ಮಾಡಿದ್ದನು. ಬಳಿಕ ಈ ಘಟನೆ ಬಗ್ಗೆ ವರ್ಗೀಸ್ ಮೇಲೆ ಮನೆ ಯಜಮಾನಿಗೆ ಅನುಮಾನ ಬಂದಿದ್ದು, ಪುಲಿಕೇಶಿ ನಗರದ ಠಾಣೆಗೆ ದೂರು ನೀಡಿದ್ದರು.
ಇದನ್ನು ಓದಿ : ಗ್ಯಾರಂಟಿ ಕೊಟ್ಟವ್ರೆ ನೋಡ್ರಪ್ಪ.. ಸರಿಯಾಗಿ ತಗೋಳಿ : ಹೆಚ್.ಡಿ ರೇವಣ್ಣ
ಈ ದೂರಿನ ಮೇರೆಗೆ ಡ್ರೈವರ್ನನ್ನು ವಿಚಾರಣೆ ನಡೆಸಿದ್ದ ಪೋಲಿಸರು. ಈ ಹಿನ್ನೆಲೆ ತಾನು ಸಿಕ್ಕಿ ಬೀಳೋದು ಪಕ್ಕಾ ಅಂತ ಗೊತ್ತಾಗಿ ಕಳೆದ ಆಗಸ್ಟ್ 21 ರಂದು ಏಳು ಪುಟಗಳ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ ಜೀಮೊನ್ ವರ್ಗೀಸ್.
ಡೆತ್ ನೋಟ್ನಲ್ಲಿ ಮಾಲೀಕರ ವಿರುದ್ಧವೇ ಆರೋಪ ಮಾಡಿದ್ದ ವರ್ಗೀಸ್. ಆದರೆ ತನಿಖೆ ವೇಳೆ ಕದ್ದ ಸ್ಥಳದಲ್ಲಿ ವರ್ಗೀಸ್ ಫಿಂಗರ್ ಪ್ರಿಂಟ್ ಪತ್ತೆಯಾಗಿದ್ದು, ಕದ್ದ ಆಭರಣವನ್ನು ಕೇರಳದ ಮನೆಯಲ್ಲಿರಿಸಿ ಬಂದಿದ್ದನು. ಆತ್ಮಹತ್ಯೆ ಬಳಿಕ ವರ್ಗೀಸ್ನ ಪತ್ನಿ ಮನೆಯಲ್ಲಿ ತಡಕಾಡಿದ್ದ ವೇಳೆ 1.5 ಕೋಟಿ ಮೌಲ್ಯದ 38 ಆಭರಣಗಳು ಸಿಕ್ಕಿದ್ದು, ಪೋಲಿಸರ ವಶಕ್ಕೆ ಒಪ್ಪಿಸಿದ ಪತ್ನಿ.
ಇನ್ನು ಒಂದು ಕೋಟಿ ಮೌಲ್ಯದ ಆಭರಣಕ್ಕಾಗಿ ಶೋಧ ನಡೆಸಿರುವ ಪುಲಿಕೇಶಿ ನಗರ ಪೋಲಿಸರು.