Monday, January 13, 2025

ತಂದೆಯಾಗಿ ಬಡ್ತಿ ಪಡೆದ ಟೀಂ ಇಂಡಿಯಾ ವೇಗಿ ಬೂಮ್ರ!

ನವದೆಹಲಿ: ಟೀಂ ಇಡಿಯಾದ ವೇಗಿ ಜಸ್​ಪ್ರೀತ್​ ಬೂಮ್ರ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಬುಮ್ರಾ ಪತ್ನಿ ಸಂಜನಾ ಗಣೇಶನ್, ಇಂದು (ಸೆ.04)​ ಮುಂಜಾನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮಗುವಿಗೆ ಅಂಗದ್ ಜಸ್​ಪ್ರೀತ್​​ ಬುಮ್ರಾ​ ಎಂದು ನಾಮಕರಣ ಮಾಡಲಾಗಿದೆ. ಏಷ್ಯಾ ಕಪ್​ ಟೂರ್ನಿಯಲ್ಲಿ ಭಾಗವಹಿಸಿದ್ದ ಬುಮ್ರಾ, ಮಗ ಜನಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸ್ಸಾಗಿದ್ದಾರೆ.

ಸಾಮಾಜಿಕ ತಾಲತಾಣಗಳಲ್ಲೊಂದಾದ ಎಕ್ಷ್​ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿರುವ ಬುಮ್ರಾ, ನಮ್ಮ ಪುಟ್ಟ ಕುಟುಂಬ ಈಗ ಬೆಳೆದಿದೆ ಮತ್ತು ನಮ್ಮ ಹೃದಯಗಳು ನಾವು ಊಹಿಸಿಕೊಳ್ಳುವುದಕ್ಕಿಂತ ಹೆಚ್ಚು ತುಂಬಿವೆ. ಇಂದು ಬೆಳಗ್ಗೆ ನಾವು ನಮ್ಮ ಪುಟ್ಟ ಕಂದ ಅಂಗದ್​ ಜಸ್ಪ್ರಿತ್​ ಬೂಮ್ರಾನನ್ನು ಜಗತ್ತಿಗೆ ಸ್ವಾಗತಿಸಿದೆವು.

ನಾವೀಗ ಚಂದ್ರನ ಮೇಲಿದ್ದೇವೆ ಮತ್ತು ನಮ್ಮ ಜೀವನದ ಈ ಹೊಸ ಅಧ್ಯಾಯವು ತನ್ನೊಂದಿಗೆ ತರುವ ಎಲ್ಲದಕ್ಕೂ ಕಾಯಲು ಸಾಧ್ಯವಿಲ್ಲ ಎನ್ನುವ ಮೂಲಕ ಬೂಮ್ರಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES