Thursday, December 19, 2024

ಗ್ಯಾರಂಟಿ ‌ಕೊಟ್ಟವ್ರೆ ನೋಡ್ರಪ್ಪ.. ಸರಿಯಾಗಿ ತಗೋಳಿ : ಹೆಚ್.ಡಿ ರೇವಣ್ಣ

ಹಾಸನ : ತಮ್ಮ ವಿರುದ್ಧ ಸಮನ್ಸ್ ಜಾರಿ ಮಾಡಲು ಮುಖ್ಯಕಾರ್ಯದರ್ಶಿಗೆ ನ್ಯಾಯಾಲಯ ಸೂಚನೆ ನೀಡಿರುವ ಬಗ್ಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಮುಖ್ಯಕಾರ್ಯದರ್ಶಿಗೆ ಯಾಕೆ ಸೂಚಿಸ್ತಾರೆ? ನೋಟಿಸ್ ಬಂದ್ರೆ ನಾನೇ ತಗೋತೇನೆ. ನನಗೆ ಈ ವಿಷಯ ಗೊತ್ತಿಲ್ಲ‌ ಎಂದು ಹೇಳಿದ್ದಾರೆ.

ಇವೆಲ್ಲ ದೇವೇಗೌಡರ ಕುಟುಂಬಕ್ಕೆ ಹೊಸತಲ್ಲ. ಇಡೀ ರಾಜ್ಯದಲ್ಲಿ ಲೋಕಾಯುಕ್ತವನ್ನು ಎದುರಿಸಿದ್ದು ದೇವೇಗೌಡರು. ಅವರನ್ನ ಬಿಟ್ರೆ ಯಾರಾದ್ರೂ ರಾಜಕಾರಣಿಗಳು ಎದುರಿಸಿದ್ದಾರಾ? ನ್ಯಾಯಾಲಯದಲ್ಲೂ ನಮ್ಮ ಕುಟುಂಬದ ಮೇಲೆ ಎಷ್ಟೆಷ್ಟು ‌ಕೇಸ್ ಹಾಕಿದ್ರು. ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ನಮ್ಮ ಕೆಲಸ ಆಯ್ತು, ಜಮೀನಾಯ್ತು

ನ್ಯಾಯಾಲಯದ ಬಗ್ಗೆ ನನಗೆ ಗೌರವವಿದೆ. ಇವನ್ನೆಲ್ಲಾ ಎದುರಿಸಿಯೇ ರಾಜಕೀಯದಲ್ಲಿ ಇರೋದು. ಆರು ಬಾರಿ ಶಾಸಕ ಆಗಬೇಕಾದ್ರೆ ಇವನ್ನೆಲ್ಲ ಎದುರಿಸೀನೆ ಆಗಿರೋದು. ಎರಡೂ ರಾಷ್ಟ್ರೀಯ ‌ಪಕ್ಷಗಳನ್ನು ಎದುರಿಸಿಯೇ ಉಳಿದುಕೊಂಡಿರೋದು. ನಮಗೆ ನಮ್ಮ ಕೆಲಸ ಆಯ್ತು, ನಮ್ಮ ಜಮೀನಾಯ್ತು ಅಷ್ಟೇ ಎಂದು ಹೇಳಿದ್ದಾರೆ.

ಗ್ಯಾರಂಟಿ ‌ಕೊಟ್ಟವ್ರೆ ತಗೋಳಿ

ನಮ್ಮ ರೈತರನ್ನ ನೊಡ್ಕೊಂಡು ಇರುತ್ತೇನೆ. ಈಗ ಮತ್ತೆ ಎಂಎಲ್ಎ ಮಾಡಿದ್ದಾರೆ. 2028 ರವರೆಗೆ ಕೆಲಸ ಮಾಡೋದು. ಕಾಂಗ್ರೆಸ್​ ನವರು ಗ್ಯಾರಂಟಿ ‌ಕೊಟ್ಟವ್ರೆ ನೋಡ್ರಪ್ಪ.. ಸರಿಯಾಗಿ ತಗೋಳಿ ಅನ್ನೋದು ಎಂದು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ರೇವಣ್ಣ ವ್ಯಂಗ್ಯವಾಡಿದ್ದಾರೆ.

RELATED ARTICLES

Related Articles

TRENDING ARTICLES