Monday, December 23, 2024

ಭಾರತೀಯ ಆಟಗಾರರಿಗೆ ಗೌತಮ್​ ಗಂಭೀರ್ ವಾರ್ನಿಂಗ್​​!

ಕ್ಯಾಂಡಿ (ಶ್ರೀಲಂಕ) :ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆದಾಗಲೆಲ್ಲಾ ಅದರಲ್ಲಿ ಪೈಪೋಟಿ ಏರ್ಪಡುತ್ತಿದ್ದು, ಆಟಗಾರರಲ್ಲೂ ಈ ಪೈಪೋಟಿ ಕಂಡು ಬರುತ್ತದೆ. ಆದರೆ, ಇದೀಗ ಮೈದಾನದಲ್ಲಿ ಆಟಗಾರರ ನಡುವೆ ಸೌಹಾರ್ದಯುತ ವಾತಾವರಣ ಕಂಡು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ.

ಮೈದಾನದಲ್ಲಿ ಯಾವುದೇ ಸ್ನೇಹ ಇರಬಾರದು ಎಂದು ಗೌತಮ್ ಗಂಭೀರ್ ಹೇಳಿದ್ದು ಪಂದ್ಯದ ನಂತರ ಏನೇ ಮಾಡಿದರೂ ಮೈದಾನದಲ್ಲಿ ಪೈಪೋಟಿ ಇರಬೇಕು ಎಂದು ಹೇಳಿದ್ದಾರೆ. ಏಷ್ಯಾ ಕಪ್ 2023ರಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮೊದಲು, ಭಾರತ ಮತ್ತು ಪಾಕಿಸ್ತಾನದ ಆಟಗಾರರು ಪರಸ್ಪರ ಭೇಟಿಯಾದ ಆಟಗಾರರ ವೀಡಿಯೊ ವೈರಲ್ ಆಗಿತ್ತು. ಮಳೆಯಿಂದಾಗಿ ಪಂದ್ಯ ರದ್ದಾದ ಬಳಿಕವೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಕ್ ಆಟಗಾರರ ಜೊತೆ ಮಾತನಾಡಿದ್ದು ಕಂಡುಬಂದಿತ್ತು.

ನೀವು ಮೈದಾನದಲ್ಲಿ ನಿಮ್ಮ ರಾಷ್ಟ್ರೀಯ ತಂಡಕ್ಕಾಗಿ ಆಡುವಾಗ, ನಿಮ್ಮ ಸ್ನೇಹವನ್ನು ಮೈದಾನದ ಹೊರಗೆ ಬಿಡಬೇಕು. ಆಟದ ಮುಖವನ್ನು ಹೊಂದಿರುವುದು ಮುಖ್ಯ. ಸ್ನೇಹ ಹೊರಗೆ ಇರಬೇಕು. ಎರಡೂ ತಂಡಗಳ ಆಟಗಾರರಲ್ಲಿ ಆ ಆಕ್ರಮಣಶೀಲತೆ ಇರಬೇಕು. ಆರು-ಏಳು ಗಂಟೆಗಳ ಕ್ರಿಕೆಟ್ ನಂತರ, ನೀವು ಸೌಹಾರ್ದ ವಾತಾವರಣವನ್ನು ಸೃಷ್ಟಿಸಬಹುದು ಏಕೆಂದರೆ ಆ ಆರು-ಏಳು ಗಂಟೆಗಳು ಬಹಳ ಮುಖ್ಯ.

ನೀವು ನಿಮ್ಮನ್ನು ಮಾತ್ರವಲ್ಲದೆ ನಿಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದೀರಿ. ಈ ದಿನಗಳಲ್ಲಿ ನೀವು ಆಟಗಾರರು ಒಬ್ಬರಿಗೊಬ್ಬರು ಬೆನ್ನು ತಟ್ಟುವುದನ್ನು ಮತ್ತು ಪರಸ್ಪರ ಮಾತನಾಡುವುದನ್ನು ನೋಡುತ್ತೀರಿ. ಆದರೆ ಕೆಲವು ವರ್ಷಗಳ ಹಿಂದೆ ಇದು ಸಂಭವಿಸಲಿಲ್ಲ. ಫ್ರಾಂಚೈಸಿ ಕ್ರಿಕೆಟ್ ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಏಕೆಂದರೆ ಎಲ್ಲಾ ಆಟಗಾರರು ಪರಸ್ಪರ ಬಹಳಷ್ಟು ಆಡಲು ಪ್ರಾರಂಭಿಸಿದ್ದಾರೆ ಎಂದರು.

RELATED ARTICLES

Related Articles

TRENDING ARTICLES