Thursday, January 23, 2025

ಜ್ಯೂಸ್ ಎಂದು ಕೀಟನಾಶಕ ಸೇವಿಸಿ ಮಗು ಸಾವು

ರಾಮನಗರ : ಜ್ಯೂಸ್ ಎಂದುಕೊಂಡು ಕೀಟನಾಶಕ ಸೇವಿಸಿ ಮಗು ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹನುಮಂತು ಮತ್ತು ಪುಷ್ಪ ದಂಪತಿಗಳ ಪುತ್ರನಾದ ಯಶ್ವಿಕ್ (2) ಮೃತ ದುರ್ದೈವಿ. ಎಂಬ ಮಗು. ಜಮೀನಿಗೆ ಸಿಂಪಡಿಸಲೆಂದು ಕೀಟನಾಶಕ ಔಷಧಿಯನ್ನು ಮನೆಯಲ್ಲಿ ತಂದಿಟ್ಟಿದ್ದರು. ಈ ವೇಳೆ ಅಂದರೆ ನಿನ್ನೆ ಅದನ್ನು ಜ್ಯೂಸ್ ಅಂದುಕೊಂಡು ಮಗು ಕೀಟನಾಶಕವನ್ನು ಕುಡಿದು ಬಿಟ್ಟಿದೆ.

ಇದನ್ನು ಓದಿ : ಹಾಡಹಗಲೇ ಬಾಲಕನನ್ನು ಕೊಂದು ತಿಂದ ಹುಲಿ

ಬಳಿಕ ಮಗು ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡಿದ್ದು, ತಕ್ಷಣ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದ ಪೋಷಕರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ. 2 ವರ್ಷದ ಮಗನನ್ನು ಕಳೆದುಕೊಂಡ ಕುಟುಬಸ್ಥರ ಆಕ್ರಂದನ ಮುಗಿಲಿ ಮುಟ್ಟಿದೆ.

ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

RELATED ARTICLES

Related Articles

TRENDING ARTICLES