ಬೆಂಗಳೂರು : ‘ಅನ್ನಭಾಗ್ಯ ಯೋಜನೆ ಹತಭಾಗ್ಯ’ ಆಗದಿರಲಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಅನ್ನದ ವಿಷಯದಲ್ಲಿ ಸರ್ಕಾರ ಕಾರಣ ಹೇಳುವಂತಿಲ್ಲ. ತಾಂತ್ರಿಕ ದೋಷಗಳಿದ್ದರೆ ಸಮರೋಪಾದಿಯಲ್ಲಿ ಸರಿ ಮಾಡಿಕೊಳ್ಳಬೇಕು. ತಡಮಾಡದೆ ಜನರಿಗೆ ಹಣ ನೀಡಬೇಕು. ದಿನಕ್ಕೊಂದು ನೆಪ ಹೇಳಿದರೆ ಅದು ಸರ್ಕಾರಕ್ಕೂ ಲಾಯಕ್ಕಲ್ಲ ಎಂದು ಕುಟುಕಿದೆ.
ಅನ್ನಭಾಗ್ಯ ಯೋಜನೆ ಆರಂಭದಲ್ಲಿಯೇ ಹಳ್ಳ ಹಿಡಿಯುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ಏಕೆಂದರೆ ಒಂದು ತಿಂಗಳು ನಡೆದ ಡಿಬಿಟಿ ಶಾಸ್ತ್ರ 2ನೇ ತಿಂಗಳಿಗೆ ಕೈಕೊಟ್ಟಿದೆ. ಮೂರನೇ ತಿಂಗಳ ಕಥೆ ಏನೋ ಗೊತ್ತಿಲ್ಲ. 29 ಲಕ್ಷ ಕುಟುಂಬಗಳು ಮೊಬೈಲ್ ಸಂದೇಶಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿವೆ ಎಂದು ಹೇಳಿದೆ.
ಹೆಜ್ಜೆಹೆಜ್ಜೆಗೂ ಎಡವಿ ಬೀಳುತ್ತಿದೆ
ಸಮರ್ಪಕ ಪೂರ್ವಸಿದ್ಧತೆಯ ಕೊರತೆ, ತಾಂತ್ರಿಕ ಸಮಸ್ಯೆ ಸೇರಿ ಹಲವು ನೆಪಗಳನ್ನು ಸರ್ಕಾರವೇ ಸೃಷ್ಟಿ ಮಾಡಿದೆ. ಆ ಮೂಲಕ ಅನ್ನಭಾಗ್ಯದ ಹಣ ನೀಡಲು ಮೀನಾಮೇಷ ಎಣಿಸುತ್ತಿದೆ. ನುಡಿದಂತೆ ನಡೆಯದ ಸರ್ಕಾರ, ಹೆಜ್ಜೆಹೆಜ್ಜೆಗೂ ಎಡವಿ ಬೀಳುತ್ತಿದೆ ಎಂದು ಲೇವಡಿ ಮಾಡಿದೆ.
ಅನ್ನದ ವಿಷಯದಲ್ಲಿ ಸರಕಾರ ಕಾರಣ ಹೇಳುವಂತಿಲ್ಲ. ತಾಂತ್ರಿಕ ದೋಷಗಳಿದ್ದರೆ ಸಮರೋಪಾದಿಯಲ್ಲಿ ಸರಿ ಮಾಡಿಕೊಳ್ಳಬೇಕು. ತಡಮಾಡದೆ ಜನರಿಗೆ ಹಣ ನೀಡಬೇಕು. ದಿನಕ್ಕೊಂದು ನೆಪ ಹೇಳಿದರೆ ಅದು ಸರಕಾರಕ್ಕೂ ಲಾಯಕ್ಕಲ್ಲ. ಅನ್ನಭಾಗ್ಯವು ಹತಭಾಗ್ಯ ಆಗದಿರಲಿ. 3/3
— Janata Dal Secular (@JanataDal_S) September 4, 2023