Monday, December 23, 2024

ಇಂದು ಬರ ಘೋಷಣೆ ಬಗ್ಗೆ ತೀರ್ಮಾನ ಸಾಧ್ಯತೆ!

ಬೆಂಗಳೂರು : ಈ ಬಾರಿ ರಾಜ್ಯದಲ್ಲಿ ನಿರೀಕ್ಷಿತ ಮಳೆಯಿಲ್ಲದೇ 200ಕ್ಕೂ ಹೆಚ್ಚು ತಾಲೂಕಿಗೆ ಬರದ ಛಾಯೆ ಆವರಿಸಿದೆ. ಈ ವರ್ಷ ಜೂನ್ ತಿಂಗಳಲ್ಲಿ 56% ಮಳೆ ಕೊರತೆಯಾಗಿದ್ದು, ಬರಗಾಲ ಘೋಷಣೆ ಬಗ್ಗೆ ರಾಜ್ಯ ಸರ್ಕಾರ ಇಂದು ತೀರ್ಮಾನ ಮಾಡಲಿದೆ.

ಇದನ್ನೂ ಓದಿ: ಪೊಲೀಸ್ ಮನೆಯಲ್ಲೇ ಒಡವೆ, ಹಣ ದೋಚಿದ ಕಳ್ಳರು!

ವಾಡಿಕೆಗಿಂತ ಕಡಿಮೆ ಮಳೆಯಾದ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ.  ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ಬರದ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಸಂಪುಟ ಉಪಸಮಿತಿಯಿಂದ ಅಧ್ಯಯನ ನಡೆಸಲಾಗಿದ್ದು, 113 ತಾಲ್ಲೂಕುಗಳಲ್ಲಿ ಬರಗಾಲ ಇದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಈ ಕುರಿತು ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಯಲಿದ್ದು, ನಂತರ ಬರ ಘೋಷಣೆ ಬಗ್ಗೆ ತೀರ್ಮಾನಿಸಲಿದ್ದಾರೆ.

RELATED ARTICLES

Related Articles

TRENDING ARTICLES