ಶಿವಮೊಗ್ಗ : ಉರ್ದು ಶಾಲೆಯೊಂದರಲ್ಲಿ ಮಕ್ಕಳಿಗೆ ಗದರಿಸುವ ಭರದಲ್ಲಿ ಶಿಕ್ಷಕಿಯೊಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ. ‘ನೀವು ಪಾಕಿಸ್ತಾನಕ್ಕೆ ಹೋಗಿ, ಇದು ನಿಮ್ಮ ದೇಶವಲ್ಲ’ ಎಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಶಿವಮೊಗ್ಗದ ಟಿಪ್ಪುನಗರ ಬಡಾವಣೆ ಬಳಿ ಇರುವ ಅಂಬೇಡ್ಕರ್ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಆರೋಪ ಸತ್ಯವೋ, ಸುಳ್ಳೋ ಎಂಬ ಬಗ್ಗೆ ಖಾತರಿಯಾಗಬೇಕಿದೆ. ಆದರೆ, ವಿದ್ಯಾರ್ಥಿಗಳು ಆರೋಪ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ : ಮುಸ್ಲಿಂರು ಮೊಹಲ್ಲಾದಲ್ಲೇ ಇರಬೇಕು, ನೀವು ಸದಾಶಿವನಗರದಲ್ಲಿ ಇರಬೇಕಾ? : ಪ್ರತಾಪ್ ಸಿಂಹ
ಸರ್ಕಾರಿ ಉರ್ದು ಶಾಲೆಯಲ್ಲಿ ಮಕ್ಕಳಿಗೆ ಶಾಲೆಯ ಕನ್ನಡ ಶಿಕ್ಷಕಿಯಾಗಿರುವ ಮಂಜುಳಾ ದೇವಿ ಮುಸ್ಲಿಂ ಮಕ್ಕಳಿಗೆ ಶಾಲೆಯ ಕೊಠಡಿಯಲ್ಲಿ ಗಲಾಟೆ ಮಾಡುತ್ತಿದ್ದ ವೇಳೆ ಗದರಿಸಿದ್ದಾರೆ. ಈ ವೇಳೆ, ಒಂದೇಟು ಕೊಡುವ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಅಲ್ಲಾಹು ಎಂದಿದ್ದಾನೆ. ಈ ಸಂದರ್ಭದಲ್ಲಿ ‘ಇದು ನಿಮ್ಮ ದೇಶ ಅಲ್ಲ, ಇದು ಹಿಂದೂಗಳ ದೇಶ. ನೀವು ಪಾಕಿಸ್ತಾನಕ್ಕೆ ಹೋಗಿ’ ಅಂತ ಗದರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗದರಿದ್ದೇನೆ, ದೇವರ ಬಗ್ಗೆ ಬೈದಿಲ್ಲ
ಶಿಕ್ಷಣ ಇಲಾಖೆ ಬಿಇಓ ವಿಚಾರಣೆ ವೇಳೆ, ಶಿಕ್ಷಕಿ ಹೇಳಿಕೆ ನೀಡಿದ್ದು, ಕೇವಲ ಗದರಿದ್ದೇನೆ ವಿನಃ ನಾನು ಪಾಕಿಸ್ತಾನಕ್ಕೆ ಹೋಗಿ, ದೇವರ ಬಗ್ಗೆ ಬೈದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಸೂಕ್ಷ್ಮ ಪರಿಸ್ಥಿತಿ ಹಿನ್ನೆಲೆಯಲ್ಲಿ ಆ ಶಾಲೆಯಿಂದ ಶಿಕ್ಷಕಿಗೆ ಬೇರೆ ಶಾಲೆಗೆ ನಿಯೋಜನೆ ಕೂಡ ಮಾಡಲಾಗಿದ್ದು, ಪರಿಸ್ಥಿತಿ ಇದೀಗ ತಿಳಿಯಾಗಿದೆ.