Wednesday, January 22, 2025

‘ಸನಾತನ ಧರ್ಮ’ ಜನರ ಹೃದಯವನ್ನು ಆಳುತ್ತಿದೆ : ಅಮಿತ್ ಶಾ

ಬೆಂಗಳೂರು : ‘ಸನಾತನ ಧರ್ಮ ಮಲೇರಿಯಾ, ಡೆಂಗ್ಯು ಇದ್ದಂತೆ, ಅದನ್ನು ನಿರ್ಮೂಲನೆ ಮಾಡಬೇಕು’ ಎಂಬ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಡುಂಗರ್‌ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ವೋಟ್ ಬ್ಯಾಂಕ್​ ಮತ್ತು ತುಷ್ಟೀಕರಣ ರಾಜಕೀಯಕ್ಕಾಗಿ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ’ ಎಂದು ಗುಡುಗಿದ್ದಾರೆ.

‘ನರೇಂದ್ರ ಮೋದಿ ಗೆಲವು ಸಾಧಿಸಿದರೆ ಸನಾತನ ಆಡಳಿತ ಬರುತ್ತದೆ ಅಂತ ಹೇಳುತ್ತಾರೆ. ಸನಾತನ ಜನರ ಹೃದಯವನ್ನು ಆಳುತ್ತಿದೆ. ಮೋದಿ ಅವರು ಸಂವಿಧಾನದ ಆಧಾರದ ಮೇಲೆ ದೇಶವನ್ನು ನಡೆಸುತ್ತಾರೆ. ಪ್ರಧಾನಿ ಮೋದಿ ರಾಷ್ಟ್ರದ ಭದ್ರತೆಗೆ ಶ್ರಮಿಸುತ್ತಿದ್ದಾರೆ’ ಎಂದು ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಮಂದಿರ ತಡೆಯಲು ಸಾಧ್ಯವಿಲ್ಲ

ರಾಮ ಮಂದಿರ ದೇವಸ್ಥಾನಕ್ಕೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿತ್ತು. ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ್ದಾರೆ. ರಾಮ ಹುಟ್ಟಿದ ನೆಲದಲ್ಲಿಯೇ ಜನವರಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಲಿದೆ. ಅದನ್ನು ತಡೆಯಲು ಇಂಡಿಯಾ ಮೈತ್ರಿಗೆ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಘಮಾಂಡಿಯ ಘಟಬಂಧನ್

ಇದು I.N.D.I.A (ಇಂಡಿಯಾ) ಮೈತ್ರಿಕೂಟ ಅಲ್ಲ, ‘ಘಮಾಂಡಿಯ ಘಟಬಂಧನ್’. ಈ ಮೈತ್ರಿಕೂಟವು ವೋಟ್​ ಬ್ಯಾಂಕ್​ ರಾಜಕೀಯಕ್ಕಾಗಿ ಯಾವುದೇ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧವಾಗಿದೆ. ಅವರು ಸನಾತನ ಧರ್ಮದ ವಿರುದ್ಧ ಹೆಚ್ಚೆಚ್ಚು ಮಾತನಾಡುತ್ತಾರೆ. ಆದರೆ, ಕಡಿಮೆ ಗೋಚರಿಸುತ್ತಾರೆ ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES