Thursday, December 19, 2024

ಗೃಹಲಕ್ಷ್ಮಿ ಹಣವನ್ನು ತಿರಸ್ಕರಿಸಿದ ಸ್ವಾಭಿಮಾನಿ ಅಜ್ಜಿ!

ಕೊಪ್ಪಳ: ಕೊಪ್ಪಳದಲ್ಲಿ ವೃದ್ಧೆಯೊಬ್ಬರು ತನಗೆ ಗೃಹಲಕ್ಷ್ಮೀ ಯೋಜನೆ ಹಣ ಬೇಡ ಎಂದು ನಯವಾಗಿ ತಿರಸ್ಕರಿಸುವ ಮೂಲಕ ಸ್ವಾಭಿಮಾನ ಮೆರೆದಿದ್ದಾರೆ.

ಇದನ್ನೂ ಓದಿ: INDIA ಸದಸ್ಯರನ್ನು ಖುಷಿಪಡಿಸಲು ತಮಿಳುನಾಡಿಗೆ ನೀರು: ಶೋಭಾ ಕರಂದ್ಲಾಜೆ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಡಶೇಷಿ ಗ್ರಾಮದ ವಯೋವೃದ್ದೆ ಶಿವಮ್ಮ‌ ಸಜ್ಜನ್ ಎಂಬುವರು ಸ್ವಾಭಿಮಾನದ ಮಾತುಗಳನ್ನಾಡಿದ್ದಾರೆ. ದೇವರು ನನಗೆ ಎಲ್ಲವನ್ನೂ ಕರುಣಿಸಿದ್ದಾನೆ. ಇರುವ ಸವಲತ್ತಿನಲ್ಲೇ ಸಂತೃಪ್ತ ಜೀವನ ನಡೆಸುತ್ತಿದ್ದೇನೆ. ಹೀಗಾಗಿ ನನಗೆ ಸರ್ಕಾರದ ಗೃಹಲಕ್ಷ್ಮಿ 2 ಸಾವಿರ ರೂಪಾಯಿ ಬೇಡವೆಂದು ತಿರಸ್ಕರಿಸಿದರು.

ಈ ಹಿಂದೆ ತಾನು ಕೂಡಿಟ್ಟಿದ್ದ ಹಣವನ್ನೇ ಗ್ರಾಮದ ಕೆರೆ ಅಭಿವೃಧ್ಧಿಗೆ ನೀಡಿ ವೃದ್ಧೆ ಎಲ್ಲರಿಗೂ ಮಾದರಿಯಾಗಿದ್ದರು. ಸದ್ಯ ಮತ್ತೊಮ್ಮೆ ಮಾದರಿ ನಿರ್ಧಾರವನ್ನು ತೆಗದುಕೊಂಡಿದ್ದಾರೆ. ಅಜ್ಜಿಯ ಈ ನಿರ್ಧಾರಕ್ಕೆ ಇಡೀ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES