Thursday, January 23, 2025

ರೇಣುಕಣ್ಣರನ್ನ ಯಾರೂ ಖರೀದಿ ಮಾಡಕ್ಕಾಗಲ್ಲ : ರಾಜೂಗೌಡ

ಬೆಂಗಳೂರು : ರೇಣುಕಣ್ಣರನ್ನ ಯಾರೂ ಖರೀದಿ ಮಾಡಕ್ಕಾಗಲ್ಲ.. ರೇಣುಕಣ್ಣನೇ‌ ಎಲ್ರನ್ನ ಖರೀದಿ ಮಾಡ್ತಾರೆ ಎಂದು ಮಾಜಿ ಶಾಸಕ ರಾಜೂಗೌಡ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ಬಿಜೆಪಿಯಲ್ಲೇ ಇರ್ತಾರೆ ಎಂದರು.

ಬಿ.ಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ವಿಚಾರ ಕುರಿತು ಮಾತನಾಡಿ, ನಮ್ಮ ರೇಣುಕಣ್ಣ ಅವರು ಯಾವ ಬಾಲ್​ಗೆ ಫೋರ್, ಸಿಕ್ಸರ್ ಹೊಡೀತಾರೆ ಅಂತ ಗೊತ್ತಾಗಲ್ಲ. ಫಿಲ್ಟರ್ ಇಲ್ಲದೇ ಮಾತಾಡ್ತಾರೆ, ಮಾತಾಡಿದ್ಮೇಲೆ ಅವರಿಗೆ ಅನ್ಸತ್ತೆ ಎಂದು ಹೇಳಿದರು.

ವಿಜಯೇಂದ್ರ ಪಕ್ಷ ಕಟ್ಟುತ್ತಿದ್ದಾರೆ

ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಪಕ್ಷ ಡೌನ್ ಫಾಲ್ ಆಗಿದ್ದು ಮೇಲೇಳಲೇ ಇಲ್ಲ. ಈಗ ಬಿಎಸ್​ವೈ ಹಾಗೂ ಬಿ.ವೈ ವಿಜಯೇಂದ್ರ ಪಕ್ಷ ಕಟ್ಟುತ್ತಿದ್ದಾರೆ. ಸೋತವರ ಜೊತೆ ಈಗಲೂ ಬಿಎಸ್​ವೈ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

ಪಕ್ಷದಲ್ಲಿ ಬೇಸರ ಇರೋದು ಸತ್ಯ

ಪಕ್ಷದಲ್ಲಿ ಅಸಮಾಧಾನ ವಿಚಾರವಾಗಿ ಮಾತನಾಡಿ, ಬೇಸರ ಇರೋದು ಸತ್ಯ. ಚರ್ಚೆ ವೇಳೆ ವಿಪಕ್ಷ ನಾಯಕ ಆಗಬೇಕು ಅಂತ ಹೇಳಿದ್ದೇವೆ. ಬೇಗ ಮಾಡಿದಾಗ ನಮಗೂ ಅನುಕೂಲ ಆಗಲಿದೆ. ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದೇನೆ. ವಿಪಕ್ಷ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಶೀಘ್ರವೇ ತುಂಬಬೇಕಿದೆ. ವಿಪಕ್ಷ ನಾಯಕನ ಜೊತೆ ವಿಪ್ ಕೂಡ ಬರಲಿದ್ದಾರೆ. ನಾಲ್ಕೈದು ಹುದ್ದೆ ಕೂಡ ಜೊತೆಯಲ್ಲೇ ಬರಲಿದೆ. ಬೇಗನೇ ನೇಮಕ ಮಾಡ್ತಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES