Wednesday, January 22, 2025

1 ಪಾನಿಪೂರಿಗಾಗಿ ನಡು ರಸ್ತೆಯಲ್ಲಿ ಹೊಡೆದಾಟ: ವೀಡಿಯೋ ವೈರಲ್

ಉತ್ತರಪ್ರದೇಶ್​ : ಇಲ್ಲೊಬ್ಬ 10 ರೂಪಾಯಿಗೆ ಕೇವಲ 7 ಗೋಲ್​ಗಪ್ಪಾ ಮಾತ್ರ ನೀಡಿದ್ದಾನೆಂಬ ವಿಷಯ ಈ ಜಗಳಕ್ಕೆ ಕಾರಣವಾಗಿದೆ.

ಗ್ರಾಹಕನೊಬ್ಬ 10 ರೂಪಾಯಿಗೆ 7 ಕ್ಕಿಂತ ಹೆಚ್ಚು ಗೋಲ್​ಗಪ್ಪಾ ನೀಡಬೇಕೆಂದು ಅಂಗಡಿಯವನ ಬಳಿ ಕೇಳಿದ್ದಾನೆ. ಅದಕ್ಕೆ ಅಂಗಡಿಯಾತ ಒಪ್ಪಲಿಲ್ಲ. ಈ ಒಂದು ಗೋಲ್​ಗಪ್ಪಾ ಇವರ ಹೊಡೆದಾಟಕ್ಕೆ ಮೂಲವಾಗಿದೆ. ಇವರಿಬ್ಬರ ನಡುವಿನ ಜಗಳ ಈಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ.

ಇದನ್ನೂ ಓದಿ: ಲಿವ್‌ಇನ್‌ನಿಂದ ವೈವಾಹಿಕ ವ್ಯವಸ್ಥೆ ನಾಶ : ಹೈಕೋರ್ಟ್​​​ ಕೆಂಡಾಮಂಡಲ

ಈ ಘಟನೆ ನಡೆದಿರೋದು ಉತ್ತರಪ್ರದೇಶದಲ್ಲಿ. ಇವರ ಈ ಜಗಳವನ್ನು ನೋಡಿ ಕುಸ್ತಿಯ ಹಲವು ಭಂಗಿಗಳಿಗೆ ಹೋಲಿಸಿದ್ದಾರೆ ನೆಟ್ಟಿಗರು. ಇನ್ನೂ ಕೆಲವರು ಕಾದಾಟದ ತೀವ್ರತೆಯನ್ನು ನೋಡಿ WWF ಎಂದು ಬಣ್ಣಿಸಿ ಕಮೆಂಟ್ ಮಾಡಿದ್ದಾರೆ. ಈ ಜಗಳವು ಸಿನಿಮಾದಲ್ಲಿ ತೋರಿಸುವ ಫೈಟ್ ನಂತೆಯೇ ಭಾಸವಾಗುತ್ತಿದೆ ಎಂದು ಹಲವರು ಪ್ರತಿಕ್ರಿಸಿದ್ದಾರೆ.

ಗ್ರಾಹಕ ಕಿಶೋರ್ ಕುಮಾರ್ ಗೋಲ್​ಗಪ್ಪಾ ಮಾರುವ ರಾಮ್ ಸೇವಕ್​ನನ್ನು ಎತ್ತಿ ಬಿಸಾಡಿದ್ದಾನೆ. ನಡು ರಸ್ತೆಯಲ್ಲಿಯೇ ಯಾರಿಗೂ ಕ್ಯಾರೆ ಎನ್ನದೆ ಇಬ್ಬರೂ ಹೊಡೆದಾಡಿದ್ದಾರೆ. ಒಂದು ಗೋಲ್​ಗಪ್ಪಾಗೆ ಇಷ್ಟೊಂದು ದೊಡ್ಡ ಜಗಳ ನಡೆದಿರುವುದು ವಿಚಿತ್ರವೆನಿಸಿದೆ.

RELATED ARTICLES

Related Articles

TRENDING ARTICLES