Monday, December 23, 2024

ನೀರಿಗಾಗಿ ‘ಕಾವೇರಿ’ದ ಅಪ್ಪಿಕೊ ಚಳವಳಿ!

ಮಂಡ್ಯ: ತಮಿಳುನಾಡಿಗೆ ಕೆ ಆರ್​ ಎಸ್​​ ಡ್ಯಾಂನಿಂದ ನೀರು ಬಿಡುಗಡೆ ಮಾಡುತ್ತಿರುವ ಹಿನ್ನಲೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟಿಸಿದರು.

ಇದನ್ನೂ ಓದಿ: ಮತ್ತೆ ಆಪರೇಷನ್ ಕಮಲ ಗ್ಯಾರಂಟಿ: ಕೆ.ಎಸ್​ ಈಶ್ವರಪ್ಪ

ಮಂಡ್ಯದ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಅಪ್ಪಿಕೋ ಚಳವಳಿ ಮಾಡುವ ಮೂಲಕ ಕಾರ್ಯಕರ್ತರು ಗಮನ ಸೆಳೆದರು. ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಪ್ರತಿಮೆಯನ್ನ ತಬ್ಬಿ ಅಪ್ಪಿಕೋ ಚಳವಳಿ ಮಾಡಿದರು. ಅಪ್ಪಿಕೋ ಚಳವಳಿ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಕಾವೇರಿ ನಮ್ಮ ಹಕ್ಕು, ಆ ಹಕ್ಕನ್ನ ರಾಜ್ಯ ಸರ್ಕಾರ ತಮಿಳುನಾಡಿಗೆ ಕೊಡ್ತಿದೆ. ಆ ಮೂಲಕ ಮಂಡ್ಯದ ಕಾವೇರಿ ಮಕ್ಕಳಿಗೆ ಅನ್ಯಾಯ ಮಾಡ್ತಿದೆ. ಕಾವೇರಿ ಕೊಳ್ಳದ ರೈತರು ಹುರುಳಿ ಬೆಳೆಯುವಂತೆ ಮಾಡ್ತಿದೆ. ನಮ್ಮ ತಾಯಿ ಕಾವೇರಿಯನ್ನ ನಮಗೆ ಉಳಿಸಿ ಎಂಬ ಆಗ್ರಹದೊಂದಿಗೆ ಅಪ್ಪಿಕೋ ಚಳವಳಿಯನ್ನ ಮಾಡಿದರು.

RELATED ARTICLES

Related Articles

TRENDING ARTICLES