Sunday, December 22, 2024

ಮಗಳ ತಂಟೆಗೆ ಬರಬೇಡ ಎಂದ ತಂದೆಯ ಕತ್ತು ಸೀಳಿದ ಪಾಗಲ್​ ಪ್ರೇಮಿ !

ಬೆಂಗಳೂರು : ನನ್ನ ಮಗಳ ತಂಟೆಗೆ ಬರಬೇಡ ಎಂದ ತಂದೆಯನ್ನು ಪಾಗಲ್​ ಪ್ರೇಮಿಯೊಬ್ಬ ಚಾಕುವಿನಿಂದ ಕುತ್ತಿಗೆಗೆ ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಂಜಪ್ಪ ಸರ್ಕಲ್​ ಬಳಿ ನಡೆದಿದೆ.

ಅನ್ವರ್​ ಮೃತ ವ್ಯಕ್ತಿ, ಜಾಹೀದ್ ಕೊಲೆ ಮಾಡಿದ ಆರೋಪಿ,  ಜಾಹಿದ್​, ಅನ್ವರ್​ ನ ಅಪ್ರಾಪ್ತ ಮಗಳ ಹಿಂದೆ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ, ಈ ವಿಚಾರಕ್ಕೆ ಸಂಬಂಧಿಸಿ ಕಳೆದ ಮೂರು ತಿಂಗಳ ಹಿಂದೆಯೇ ಅನ್ವರ್​ ತನ್ನ ಮಗಳ ಹಿಂದೆ ಬರಬೇಡ ಎಂದು ಜಾಹೀದ್​ ಗೆ ಎಚ್ಚರಿಕೆಯನ್ನು ನೀಡಿದ್ದ.

ಇದನ್ನೂ ಓದಿ: ಮತ್ತೆ ಬಂತು ಬಿಗ್​ಬಾಸ್ ಸೀಸನ್​: ಈ ಬಾರಿ ‘ಸಮ್​ಥಿಂಗ್ ಸ್ಪೆಷಲ್’

ಎಚ್ಚರಿಕೆ ನೀಡಿದ್ದರೂ ಜಾಹೀದ್​ ಸಹ ಅಪ್ರಾಪ್ತೆಯ ಹಿಂದೆ ಬಿದ್ದ ಆರೋಪಿ ಜಾಹೀದ್​, ಶನಿವಾರ ರಾತ್ರಿ ಇದೇ ವಿಚಾರವಾಗಿ ಅನ್ವರ್​ ಮತ್ತು ಜಾಹೀದ್​ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯು ವಿಕೋಪಕ್ಕೆ ತಿರುಗಿ ಆರೋಪಿ ಜಾಹೀದ್​ ಅನ್ವರ್​ ಕತ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಸದ್ಯ ಈ ಘಟನೆಯೂ ಬೆಂಗಳೂರಿನ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES