Sunday, December 22, 2024

ರಕ್ಷಣೆ ಕೊಡಬೇಕಾದ ಪೊಲೀಸನಿಂದಲೇ ಪತ್ನಿಗೆ ವರದಕ್ಷಿಣೆ ಕಿರುಕುಳ

ತುಮಕೂರು : ರಕ್ಷಣೆ ಕೊಡಬೇಕಾದ ಪೋಲಿಸಪ್ಪನಿಂದಲೇ ವರದಕ್ಷಿಣೆ ಕಿರುಕುಳ ಹಿನ್ನೆಲೆ ಬೇಸತ್ತು ಪೋಲಿಸ್ ಮೆಟ್ಟಿಲೇರಿದ ಪತ್ನಿ.

ಜಿಲ್ಲೆಯ ಸಂಚಾರಿ ಪೋಲಿಸ್ ಠಾಣೆಯ ಪೋಲಿಸ್ ಪೇದೆಯಾಗಿರುವ ಸುನಿಲ್ ಕುಮಾರ್. ಕಳೆದ ಒಂದೂವರೆ ವರ್ಷದ ಹಿಂದೆ ಅರಸಿಕೆರೆ ಮೂಲದ ಸಹನ ಎಂಬುವವರ ಜೊತೆ ವಿವಾಹ ಆಗಿದ್ದರು. ಆದರೆ ಇವರಿಬ್ಬರ ಮದುವೆಗೆ ಇನ್ನೆರಡು ದಿನ ಬಾಕಿ ಇರುವಾಗಲೇ ಸಹನಾಗೆ ಬ್ರೈನ್ ಟ್ರೂಮರ್ ಆಗಿತ್ತು.

ಇದನ್ನು ಓದಿ : 5 ತಿಂಗಳ ಮಗುವಿಗೆ ವಿಷ ಬೆರಸಿ ಕೊಲೆ ಮಾಡಿದ ಪಾಪಿ ಮಲತಾಯಿ

ಈ ವಿಚಾರದ ಬಗ್ಗೆ ಪತಿ ಸುನಿಲ್ ಗೆ ತಿಳಿಸಿ 25 ಗ್ರಾಂ ಚಿನ್ನದ ಸರ, 12 ಗ್ರಾಂ ಉಂಗುರ ಹಾಗೂ 30 ಗ್ರಾಂ ಬಂಗಾರದ ಬಳೆಯನ್ನು ವರದಕ್ಷಿಣೆ ನೀಡಿದ್ದ ಪೋಷಕರು. ಆದರೂ ಸಹ ಪತಿ ಸುನಿಲ್ ಕಳೆದ ಒಂದು ವರ್ಷದಿಂದ ಮನೆ ಕಟ್ಟಬೇಕು ಹಣ ತಗೊಂಡು ಬಾ, ಅಂತ ನಿರಂತರವಾಗಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು.

ಈ ಹಿನ್ನೆಲೆ ಮನನೊಂದ ಪತ್ನಿ ಸಹನಾ ಕಿರುಕುಳ ತಾಳಲಾರದೆ ಪತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತುಮಕೂರು ಎಸ್ ಪಿ ಗೆ ದೂರು ನೀಡಿದ್ದಾರೆ. ಅಲ್ಲದೆ ಲಾಠಿಯಿಂದ ಸಹನಗೆ ಥಳಿಸಿದ್ದಾರೆಂದು ಆರೋಪ ಮಾಡ್ತಿರುವ ಸಹನ ಕುಟುಂಬಸ್ಥರು.

ಈ ಘಟನಾ ಸಂಬಂಧ ಎಸ್ ಪಿ ಆದೇಶದ ಮೇರೆಗೆ ತುಮಕೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES