Sunday, December 22, 2024

ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್​ ಸಿಬ್ಬಂದಿಗಳನ್ನು ಅಟ್ಟಾಡಿಸಿ ಹೊಡೆದ ವ್ಯಕ್ತಿ!

ಚಿಕ್ಕಮಗಳೂರು : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಪೆಟ್ರೋಲ್‌ ಬಂಕ್ ಸಿಬ್ಬಂದಿಯನ್ನು  ಅಟ್ಟಾಡಿಸಿಕೊಂಡು ಥಳಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರದ ಬಳಿ ನಡೆದಿದೆ.

ಕಾರಿಗೆ ಪೆಟ್ರೋಲ್​ ಹಾಕಿಸುವ ವಿಚಾರಕ್ಕೆ ಸಂಬಂಧಿಸಿ ಕಾರು ಚಾಲಕ ಮಧು ಹುರುಡಿ ಎನ್ನುವ ವ್ಯಕ್ತಿ ಬಂಕ್​ ಮ್ಯಾನೇಜರ್​ ಸೇರಿದಂತೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.

ಪೆಟ್ರೋಲ್​ ಬಂಕ್​ ಬಳಿಗೆ ಬಂದ ಕಾರ್​ ಚಾಲಕ ಮಧು ಹುರುಡಿ, ಕಾರಿಗೆ ಪೆಟ್ರೋಲ್​ ಹಾಕುವಂತೆ ಬಂಕ್​ ಸಿಬ್ಬಂದಿಗೆ ಕೇಳಿದ್ದಾನೆ,  ಈ ವೇಳೆ ಬಂಕ್​ ಸಿಬ್ಬಂದಿ ತಮ್ಮ ಶೀಫ್ಟ್​ ಮುಗಿದಿದ್ದು ಮನೆಗೆ ಹೊರಟಿದ್ದೇವೆ ಬೇರೆಯವರು ಬಂದು ಪೆಟ್ರೋಲ್​ ಹಾಕುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Asia Cup 2023: ಇಂಡೋ-ಪಾಕ್ ಕದನಕ್ಕೆ ಕೌಂಟ್‌ಡೌನ್

ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದೆ. ಸಿಟ್ಟಿಗೆದ್ದ ಕಾರು ಚಾಲಕ ಮಧು ಸಿಬ್ಬಂದಿ ಮೇಲೇ ವಾಗ್ದಾಳಿ ನಡೆಸಿ ಬಳಿಕ ಹಲ್ಲೆ ಮಾಡಿದ್ದಾನೆ.

ಮೂಡಿಗೆರೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕಾರು ಚಾಲಕ ಮಧು ಹುರುಡಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

RELATED ARTICLES

Related Articles

TRENDING ARTICLES