Sunday, December 22, 2024

ರಜನಿಕಾಂತ್​ಗೆ ಹೊಸ BMW ಕಾರ್ ಗಿಫ್ಟ್ ಕೊಟ್ಟ ಜೈಲರ್ ಪ್ರೊಡ್ಯೂಸರ್

ಚನ್ನೈ: ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ ಚಿತ್ರ ಕಳೆದ ತಿಂಗಳು 10 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಅಬ್ಬರಿಸುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್ ನಾಯಕನಾಗಿ ನಟಿಸಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಗೆದ್ದು ಬೀಗಿದೆ. ಇದೀಗ ಕಲಾನಿಧಿ ಮಾರನ್ ಅವರು ಚಿತ್ರದ ನಾಯಕ ರಜನಿ ಅವರಿಗೆ ಹೊಸ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಹೌದು.. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಕೊಲಮಾವು ಕೋಕಿಲ, ಡಾಕ್ಟರ್ ಸೇರಿದಂತೆ ಮುಂತಾದ ಚಿತ್ರಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸಿವಾಗಿದ್ದವು. ಇದೀಗ ಜೈಲರ್ ಸಿನಿಮಾ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿದೆ. ಜೈಲರ್‌ನಲ್ಲಿ ಭಾರತ ಚಿತ್ರರಂಗದ ಅನೇಕ ನಟ-ನಟಿಯರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದ ಭಾರೀ ಯಶಸ್ಸಿನ ನಂತರ ನಿರ್ಮಾಪಕ ಕಲಾನಿಧಿ ಅವರು ರಜನಿಗೆ ಬಿಗ್‌ ಗಿಫ್ಟ್‌ ನೀಡಿದ್ದಾರೆ.

ಬೆಲೆ ಎಷ್ಟು? : ಭಾರತದ ಅತ್ಯಂತ ದುಬಾರಿ ಕಾರುಗಳಲ್ಲಿ BMW ಒಂದು. ಅದರಲ್ಲೂ X7 ಸರಣಿಯ ಕಾರುಗಳು ತುಂಬಾ ದುಬಾರಿ. ಇವು 6-8 ಆಸನಗಳ ಕಾರುಗಳಾಗಿವೆ. ಈ ಮಾದರಿಯ ಕಾರುಗಳ ಬೆಲೆ 1.22 ಕೋಟಿಯಿಂದ 1.52 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಸದ್ಯ ರಜನಿಕಾಂತ್ ಅವರಿಗೆ ನೀಡಿರುವ ಕಾರು ಬಿಎಂಡಬ್ಲ್ಯು ಎಕ್ಸ್7 ಸರಣಿಯ ಅತ್ಯಂತ ದುಬಾರಿ ಕಾರು ಎಂಬ ಟಾಕ್‌ ಇದೆ.

ಜೈಲರ್ ಒಟ್ಟು ಸಂಗ್ರಹ : ಜೈಲರ್ ಚಿತ್ರ 22 ದಿನಗಳ ನಂತರ ಥಿಯೇಟರ್ ನಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಚಿತ್ರದ ಮೊದಲ ದಿನದ ಕಲೆಕ್ಷನ್ 50 ಕೋಟಿ ದಾಟಿತ್ತು. ರಜಾದಿನಗಳು ಮತ್ತು ವಾರಾಂತ್ಯಗಳಲ್ಲಿ ಸಂಗ್ರಹವು ದ್ವಿಗುಣಗೊಂಡಿತ್ತು. ಇದುವರೆಗೂ ಚಿತ್ರ 650 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

 

RELATED ARTICLES

Related Articles

TRENDING ARTICLES