Monday, December 23, 2024

ಮೂವರು ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆ ಯತ್ನ; ಇಬ್ಬರ ಸಾವು

ವಿಜಯಪುರ : ಕೌಟುಂಬಿಕ ಕಲಹದ ಹಿನ್ನೆಲೆ ತನ್ನ ಮೂವರು ಮಕ್ಕಳಿಗೆ ವಿಷ ಹಾಕಿ ತಂದೆ ಕೂಡ ಆತ್ಮಹತ್ಯಗೆ ಯತ್ನಿಸಿರುವ ಘಟನೆ ಬಸವನ ಬಾಗೇಬಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ.

ಮಸಬಿನಾಳ ಗ್ರಾಮದ ನಿವಾಸಿ ಭೀರಣ್ಣ ಮಸಬಿನಾಳ ಎಂಬುವ ವ್ಯಕ್ತಿ ತನ್ನ ಪತ್ನಿಯ ಜೊತೆ ಕೌಟುಂಬಿಕ ಕಲಹ ಉಂಟಾಗಿದ್ದು, ಮನೆ ಬಿಟ್ಟು ಹೋಗಿದ್ದ ಪತ್ನಿ. ಈ ಹಿನ್ನೆಲೆ ಶಾಂತಾ (7), ರಾಯಣ್ಣ (4) ಮೃತ ದುರ್ದೈವಿಗಳು.  ಹಾಗೂ ಸಂಗಮೇಶ ಎಂಬ ತನ್ನ ಮೂವರು ಮಕ್ಕಳಿಗೆ ವಿಷ ಹಾಕಿ, ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.

ಇದನ್ನು ಓದಿ : ರಕ್ಷಣೆ ಕೊಡಬೇಕಾದ ಪೊಲೀಸನಿಂದಲೇ ಪತ್ನಿಗೆ ವರದಕ್ಷಿಣೆ ಕಿರುಕುಳ

ಬಳಿಕ ನಾಲ್ವರನ್ನು ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶಾಂತಾ ಮತ್ತು ರಾಯಣ್ಣ ಇಬ್ಬರೂ ಮಕ್ಕಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಅದೃಷ್ಟವಶಾತ್ ತಂದೆ ಭೀರಣ್ಣ ಹಾಗೂ ಸಂಗಮೇಶ ಪ್ರಾಣಪಾಯದಿಂದ ಪಾರಗಿದ್ದಾರೆ.

ಈ ದುರ್ಘಟನೆ ಮನಗೂಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES