Wednesday, January 22, 2025

ಇಸ್ರೋ ಇನ್ನೊಂದು ಸಾಹಸ : ಸೂರ್ಯಯಾನ ಉಡಾವಣೆಗೆ ಕ್ಷಣಗಣನೆ!

ಬೆಂಗಳೂರು : ಚಂದ್ರಯಾನ ಉಡಾವಣೆ ಯಶಸ್ಸಿನ ಬೆನ್ನಲ್ಲೆ ಇಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೂರ್ಯಯಾನಕ್ಕೆ ಸಿದ್ದತೆ ಮಾಡಿಕೊಂಡಿದ್ದು ಇಂದು ಉಡಾವಣೆ ನಡೆಯಲಿದೆ.

ಚಂದ್ರನ ಕುತೂಹಲ ಭೇದಿಸುವ ಉದ್ದೇಶದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ‘ಚಂದ್ರಯಾನ-3’ ಯೋಜನೆ ಯಶಸ್ವಿಯಾದ ಬೆನ್ನಲ್ಲೇ, ಇದೀಗ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜಾಗಿದೆ. ಇಂದು ಬೆಳಗ್ಗೆ 11.50ಕ್ಕೆ ಪಿಎಸ್‌ಎಲ್‌ವಿ ರಾಕೆಟ್ ಮೂ ಲಕ ‘ಆದಿತ್ಯ ಎಲ್1’ ನೌಕೆ ಉಡಾವಣೆ ಯಾಗಲಿದೆ. ಇದು ಭಾರತ ಕೈಗೊಳ್ಳುತ್ತಿರುವ ಮೊದಲ ಸೂರ್ಯಯಾನವಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಯರ ಜೊತೆ ಶಿಕ್ಷಕನ ಅನುಚಿತ ವರ್ತನೆ

ಸೂರ್ಯನ ಶಿಕಾರಿ ಒಟ್ಟು 15 ಲಕ್ಷ ಕಿ.ಮೀ ದೂರ ಸಂಚರಿಸಲಿದೆ, ಭೂಮಿಯಿಂದ 15 ಲಕ್ಷ ಕಿ.ಮೀ. ಅಂತರದಲ್ಲಿರುವ ‘ಎಲ್-1’ ಬಿಂದುವಿನಲ್ಲಿ ನೌಕೆ ನಿಯೋಜನೆ ಇದನ್ನು ತಲುಪಲು ಒಟ್ಟು 125 ದಿನ ಸಮಯ ತೆಗೆದುಕೊಳ್ಳಲಿದೆ.

ಇಂದು ಉಡಾವಣೆಯಾಗಲಿರುವ ಆದಿತ್ಯ ಎಲ್ -1 ನೌಕೆಯಲ್ಲಿ ವಿವಿಧ ಅಧ್ಯಯನಕ್ಕಾಗಿ ತೆರಳುತ್ತಿರುವ 7 ಸಾಧನಗಳು ತನ್ನೊಟ್ಟಿಗೆ ಹೊತ್ತು ನಡೆಯಲಿದೆ.

RELATED ARTICLES

Related Articles

TRENDING ARTICLES