Sunday, January 19, 2025

ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

ಮೈಸೂರು : ಸಾವಿನ ಸಂದರ್ಭದಲ್ಲೂ ಅಂಗಾಗ ದಾನ ಮಾಡಿ ಸಾರ್ಥಕತೆ ಮೆರೆದ ಯುವಕ ಘಟನೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಪಾಂಡವಪುರ ತಾಲೂಕಿನ ಇಂಗಲಗುಪ್ಪೆ ಗ್ರಾಮದ ಪ್ರಜ್ವಲ್ (21) ಮೃತ ದುರ್ದೈವಿ. ಎಂಬ ಯುವಕನಿಗೆ ಆರು ತಿಂಗಳ ಹಿಂದೆ ಪಾಂಡವಪುರ ರೈಲ್ವೆ ಸ್ಟೇಷನ್ ಬಳಿ ಅಪಘಾತವಾಗಿತ್ತು. ಈ ವೇಳೆ ಅಲ್ಲೆ ಇದ್ದ ಸ್ಥಳೀಯರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆತಯಲ್ಲಿ ಸಾವನ್ನಪ್ಪಿದ್ದ ಯುವಕ.

ಇದನ್ನು ಓದಿ : ರಂಗನಾಥಸ್ವಾಮಿ ವಿಶೇಷ ಪೂಜೆ; H.D ದೇವೇಗೌಡ್ರು ಕುಟುಂಬ ಭಾಗಿ

ಆದ್ದರಿಂದ ಸಾವನ್ನಪ್ಪಿದ್ದ ಪ್ರಜ್ವಲ್​ನ ಮೆದುಳು ದಾನ ಮಾಡುವ ಹಿನ್ನೆಲೆ ಪೋಷಕರ ಬಳಿ ಮನವಿ ಮಾಡಿದ್ದರು. ಬಳಿಕ ಪೋಷಕರ ಅಪ್ಪಣೆ ಮೇರೆಗೆ ಯುವಕನ ಅಂಗಾಗ ದಾನ ಮಾಡಲಾಯಿತು. ಮಗನ ಸಾವಿನ ದುಃಖದಲ್ಲಿಯು ಮಗನ ಮೆದುಳು ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು.

RELATED ARTICLES

Related Articles

TRENDING ARTICLES