Wednesday, January 22, 2025

ಕಿಚ್ಚ ಸುದೀಪ್​ ಹುಟ್ಟುಹಬ್ಬ ಆಚರಣೆಗೆ ಭರ್ಜರಿ ಸಿದ್ದತೆ!

ಬೆಂಗಳೂರು : ನಾಳೆ ಸ್ಯಾಂಡಲ್​ವುಡ್​ ಸ್ಟಾರ್ ನಟ ಕಿಚ್ಚ ಸುದೀಪ್​ಗೆ 50 ನೇ ಹುಟ್ಟುಹಬ್ಬ ಸಂಭ್ರಮ, ಈ ಹಿನ್ನೆಲೆ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದ್ದು ಇಂದು ರಾತ್ರಿಯಿಂದಲೇ  ಅಭಿಮಾನಿಗಳೊಂದಿಗೆ ಕಿಚ್ಚ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ.

ಕೊರೋನಾ ಹಾಗು ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅವರ ಅಕಾಲಿಕ ಅಗಲಿಕೆಯಿಂದ ತಮ್ಮ ಹುಟ್ಟುಹಬ್ಬವನ್ನು ಕಳೆದ ಮೂರು ವರ್ಷಗಳಿಂದ ಆಚರಣೆ ಮಾಡಿಕೊಂಡಿರಲಿಲ್ಲ. ಆದರೇ, ಈ ಬಾರಿ ಅದ್ದೂರಿಯಾಗಿ ಆಚರಿಸಿಕೊಳ್ಳಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಇಂದು ರಾತ್ರಿ 10 ಗಂಟೆಯಿಂದ 12 ಗಂಟೆ ವರೆಗೆ ಕಿಚ್ಚ ಸುದೀಪ್​ ತಮ್ಮ ಅಭಿಮಾನಿಗಳನ್ನ ಭೇಟಿ ಮಾಡಲಿದ್ದು ಇದಕ್ಕಾಗಿ ಬೃಹತ್ ವೇದಿಕೆ ಸಿದ್ದಪಡಿಸಲಾಗಿದೆ. ಸುದೀಪ್​ ಪತ್ನಿ ಪ್ರಿಯಾ ಸುದೀಪ್​ ಈಗಾಗಲೇ ಬೃಹತ್​ ಸ್ಟೇಜ್ ಪರಿಶೀಲನೆ ನಡೆಸಿದ್ದಾರೆ

ಸುದೀಪ್​ ಹುಟ್ಟುಹಬ್ಬದ ಪ್ರಯುಕ್ತ ಹಲವು ಸರ್ಪ್ರೈಸ್​ಗಳು  ಕಾಯುತ್ತಿದ್ದು  ಇಂದು ರಾತ್ರಿ 12ಗಂಟೆಗೆ ಕಿಚ್ಚ ನ 46ನೇ ಚಿತ್ರದ ಟೈಟಲ್ ಟೀಸರ್ ಲಾಂಚ್ ಮತ್ತು ಮೂರು ಹೊಸ ಸಿನಿಮಾಗಳು ಅನೌನ್ಸ್ ಆಗಲಿದೆ.

ಕಬ್ಜ ಖ್ಯಾತಿಯ ಆರ್ ಚಂದ್ರು ಜೊತೆ ಗ್ಲೋಬಲ್ ಮೂವಿ, KRG ಸ್ಟುಡಿಯೋಸ್ ಜೊತೆ ಮತ್ತೊಂದು ನ್ಯೂ ವೆಂಚರ್, KRG ಬ್ಯಾನರ್ ಸಿನಿಮಾದಲ್ಲಿ ನಟಿಸೋದರ ಜೊತೆಗೆ ಕಿಚ್ಚ ನಿರ್ದೇಶನ ಮಾಡಲಿದ್ದು ತೆಲುಗು ಬ್ಯಾನರ್ ಸತ್ಯ ಜ್ಯೋತಿ ಫಿಲಂಸ್ ನಡಿ ಚೇರನ್ ನಿರ್ದೆಶನದ ಹೊಸ ಸಿನಿಮಾದಲ್ಲಿ ನಟ ಸುದೀಪ್​ ಅಭಿನಯಿಸಲಿದ್ದಾರೆ.

RELATED ARTICLES

Related Articles

TRENDING ARTICLES