Monday, December 23, 2024

ಜೂರಿಚ್‌ ಡೈಮಂಡ್ ಲೀಗ್​: ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ನೀರಜ್​ ಚೋಪ್ರ

ಜೂರಿಚ್‌ : ವಿಶ್ವ ಚಾಂಪಿಯನ್​ ನೀರಜ್ ಚೋಪ್ರಾ ಅವರು ಜೂರಿಚ್‌ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ 85.71 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಮೂಲಕ ಮುಂಬರುವ ಸೆಪ್ಟೆಂಬರ್ 17ರಂದು ಯುಜಿನ್‌ನಲ್ಲಿ ನಡೆಯಲಿರುವ ಡೈಮಂಡ್ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಗುರುವಾರ ತಡರಾತ್ರಿ ನಡೆದ ಜೂರಿಚ್‌ ಡೈಮಂಡ್‌ ಲೀಗ್‌ನಲ್ಲಿ 25 ವರ್ಷದ ನೀರಜ್‌ ಚೋಪ್ರಾ, ಲೀಗ್ ಥ್ರೋಗಳ ಪೈಕಿ ಕ್ರಮವಾಗಿ 80.79 ಮೀಟರ್, 85.22 ಮೀಟರ್ ಹಾಗೂ 85.71 ಮೀಟರ್ ದೂರ ಜಾವೆಲಿನ್ ಎಸೆದಿದ್ದಾರೆ.

ಜೆಕ್ ಗಣರಾಜ್ಯದ ಜೇಕಬ್‌ ವೆಡ್ಲ್‌ಜೆಕ್ 85.86 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಜರ್ಮನಿಯ ಜೂಲಿಯನ್ ವೇಬರ್ 85.04 ಮೀಟರ್ ದೂರ ಎಸೆಯುವ ಮೂಲಕ ಜೂರಿಚ್ ಡೈಮಂಡ್ ಲೀಗ್‌ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ನೀರಜ್ ಚೋಪ್ರಾ, ಈ ಹಿಂದೆ ಸ್ವಿಟ್ಜರ್‌ಲೆಂಡ್ ಹಾಗೂ ಹಂಗೇರಿಯಲ್ಲಿ ತೋರಿದಂತಹ ಪ್ರದರ್ಶನವನ್ನು ಜೂರಿಚ್ ಡೈಮಂಡ್ ಲೀಗ್‌ನಲ್ಲಿ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ನೀರಜ್ ಚೋಪ್ರಾ ಸ್ವಿಟ್ಜರ್‌ಲೆಂಡ್‌ನಲ್ಲಿ 88.77 ಮೀಟರ್ ಹಾಗೂ ಹಂಗೇರಿಯಲ್ಲಿ 88.17 ಮೀಟರ್ ದೂರ ಜಾವೆಲಿನ್ ಎಸೆದಿದ್ದರು. ಆದರೆ ಜೂರಿಚ್‌ ಡೈಮಂಡ್ ಲೀಗ್‌ನಲ್ಲಿ 86 ಮೀಟರ್ ದೂರ ಗಡಿ ದಾಟಲೂ ಸಾಧ್ಯವಾಗಲಿಲ್ಲ.

RELATED ARTICLES

Related Articles

TRENDING ARTICLES