Wednesday, January 22, 2025

ವಿದ್ಯಾರ್ಥಿನಿಯರ ಜೊತೆ ಶಿಕ್ಷಕನ ಅನುಚಿತ ವರ್ತನೆ

ಹಾಸನ : ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ತೋರಿದ ಶಿಕ್ಷಕನಿಗೆ ಮನಬಂದಂತೆ ಥಳಿಸಿದ ಪೋಷಕರು ಘಟನೆ ಚನ್ನರಾಯಪಟ್ಟನ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆ ಹಿರಿಯ ಪ್ರಾಥಮಿಕ ಪಾಠಶಾಲೆಯೊಂದರ ಮುಖ್ಯ ಶಿಕ್ಷಕ ಮಂಜುನಾಥ ಎಂಬ ವ್ಯಕ್ತಿ, ಶಾಲೆಯಲ್ಲಿ ಓದುತ್ತಿದ್ದ 7 ನೇ ತರಗತಿ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆಯನ್ನು ತೋರುತ್ತಿದ್ದ.

ಇದನ್ನು ಓದಿ : ನಾನು ಬಳೆ ಹಾಕೊಂಡು ಕೂತಿಲ್ಲ.. ಅಖಾಡದಲ್ಲಿ ಎಲ್ಲದಕ್ಕೂ ರೆಡಿ : ಸಂಸದ ಜಾಧವ್ ಸವಾಲ್

ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯರಿಗೆ ನಿಮ್ಮನ್ನು ಮದುವೆ ಆಗುತ್ತೇನೆ ಎಂದು ಪ್ರತಿದಿನ ಕಿರುಕುಳ ನೀಡುತ್ತಿದ್ದ ಶಿಕ್ಷಕ. ಈ ಹಿನ್ನೆಲೆ ಶಿಕ್ಷಕನ ಕಿರುಕುಳ ತಾಳಲಾರದೆ ಪೋಷಕರ ಬಳಿ ಶಿಕ್ಷಕನ ಅನನುಚಿತ ವರ್ತನೆ ಬಗ್ಗೆ ಹೇಳಿಕೊಂಡಿದ್ದ ವಿದ್ಯಾರ್ಥಿನಿಯರು.

ಬಳಿಕ ಈ ವಿಚಾರ ತಿಳಿಯುತ್ತಿದ್ದಂತೆ ಶಾಲೆಗೆ ನುಗ್ಗಿ ಶಿಕ್ಷಕನಿಗೆ ಮನಬಂದಂತೆ ಥಳಿಸಿದ ಪೋಷಕರು. ಅಷ್ಟೇ ಅಲ್ಲದೆ ಈ ಘಟನಾ ಸಂಬಂಧ ಆರೋಪಿ ಶಿಕ್ಷಕನನ್ನು ಠಾಣೆಗೆ ಕರೆದೊಯ್ದ ಪೋಲಿಸರು.

RELATED ARTICLES

Related Articles

TRENDING ARTICLES