Wednesday, January 22, 2025

ಲಾರಿ- ಮಿನಿಲಾರಿ ಡಿಕ್ಕಿ; ಮೂವರು ಸಾವು

ವಿಜಯನಗರ : ನಿಂತಿದ್ದ ಮಿನಿ ಲಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಕೂಡ್ಲಿಗಿ ಮತ್ತು ಕೊಟ್ಟೂರು ಮಾರ್ಗಮಧ್ಯೆಯ ಸಾಸಲವಾಡ ಕ್ರಾಸ್ ಬಳಿ ನಡೆದಿದೆ.

ಕೊಟ್ಟೂರು ತಾಲೂಕಿನ ಬತ್ತನಹಳ್ಳಿಯ ತಿಪ್ಪಣ್ಣ ಹಾಗೂ ಅವರ ಸಂಬಂಧಿಕರು ಹುಲಿಗಿ ದೇವಾಲಯಕ್ಕೆ ಎಂದು ಹೊರಟಿದ್ದರು. ಈ ಹಿನ್ನೆಲೆ ಮಿನಿಲಾರಿ ಹತ್ತಿದ್ದ 10 ಜನರು ಸಾಸಲವಾಡ ಕ್ರಾಸ್ ಬಳಿ ತಮ್ಮ ಸಂಬಂಧಿಕರಿಗೆ ಕಾಯ್ತಾ ಇದ್ದ, ವೇಳೆ ಲಾರಿ ಒಂದು ಏಕಾಏಕಿ ಬಂದು ಡಿಕ್ಕಿ ಹೊಡೆದಿದೆ.

ಇದನ್ನು ಓದಿ : ಕುಮಾರಣ್ಣ ವಿಧಾನಸೌಧದಲ್ಲಿ ಹೇಗೆ ಘರ್ಜಿಸ್ತಾರೆ, ಈಗಲೂ ಹಾಗೆಯೇ ಇದ್ದಾರೆ : ಪ್ರತಾಪ್ ಸಿಂಹ

ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಗಜಾಪುರದ ಮಿನಿಲಾರಿ ಚಾಲಕ ಗುರುವಣ್ಣ (40), ಬತ್ತನಹಳ್ಳಿಯ ತಿಪ್ಪಣ್ಣ (55) ಮತ್ತು ಬಸವರಾಜ್ (25) ಮೃತ ದುರ್ದೈವಿಗಳು. ಈ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಲಾರಿಯಲ್ಲಿ ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳಿಕ ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿಎಲ್ ರವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

RELATED ARTICLES

Related Articles

TRENDING ARTICLES