Monday, December 23, 2024

ಸೋನಿಯಾ ಗಾಂಧಿಗೆ ಬೈದಿದ್ರಿ, ಈಗ ಯಾರ ಕಾಲ ಕೆಳಗೆ ಇದ್ದಿರಾ? : ಸಿದ್ದರಾಮಯ್ಯ ವಿರುದ್ಧ ಜಿ.ಟಿ ದೇವೇಗೌಡ ಕಿಡಿ

ಬೆಂಗಳೂರು : ಸಿದ್ದರಾಮಯ್ಯ ಅವ್ರೇ, ಅಂದು ಸೋನಿಯಾ ಗಾಂಧಿ ಅವರಿಗೆ ಬೈದಿಲ್ವಾ? ಈಗ ಯಾರ ಕಾಲ ಕೆಳಗೆ ಇದ್ದಿರಾ? ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಜಿ.ಟಿ ದೇವೇಗೌಡ ಕೆಂಡಾಮಂಡಲರಾದರು.

ಕೆಲಸಕ್ಕೆ ಬಾರದವರನ್ನು ಗೆಲ್ಲಿಸಿದ್ರಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನೀವು ಕಾಂಗ್ರೆಸ್ ಪಕ್ಷವನ್ನು ಸೀಮೆ ಎಣ್ಣೆ ಪಾರ್ಟಿ ಅಂದ್ರಿ.. ಬಿಜೆಪಿ ಬೆಂಕಿಪೊಟ್ಟಣ ಪಾರ್ಟಿ ಅಂದ್ರಿ.. ಸೋನಿಯಾ ಗಾಂಧಿಗೆ ಬೈದಿದ್ರಿ.. ನಂತರ ಯಾರ ಜೊತೆಗೆ ಸೇರಿಕೊಂಡ್ರಿ ಎಂದು ಗುಡುಗಿದರು.

ಈ ರೀತಿಯ ಹೇಳಿಕೆ‌ ನೀಡ್ತಿರಲ್ಲ ಸಿದ್ದರಾಮಯ್ಯ ಅವರೇ, ನಾನು ಯಾರ ಸಹವಾಸದಲ್ಲಿ ಇದ್ದೆ ಅಂತ ಮೊದಲು ತಿಳಿದುಕೊಳ್ಳಿ. ನಾನು ಐದು ಬಾರಿ ಗೆದ್ದಿದ್ದೀನಿ, ನೀವು ಸೋತಿದ್ರಿ. ರಾಜಶೇಖರ ಮೂರ್ತಿ ವಿರುದ್ಧ ಸೋತ್ರಿ, ನನ್ನ ವಿರುದ್ಧ ಸೋತ್ರಿ. 2013ರಲ್ಲಿ ನನ್ನ ಸೋಲಿಸಲು ಬಂದ್ರಿ, ಸೋಲಿಸಲು ಆಯ್ತಾ? ನೀವು ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.

ನನಗೆ ಅನ್ಯಾಯ ‌ಮಾಡಿದ್ರಿ‌ ನೀವು

ಕುಮಾರಸ್ವಾಮಿ ಸಿಎಂ ಸ್ಥಾನದಿಂದ‌ ಇಳಿಸೋಕೆ ಯಾರ ಜೊತೆಗೆ ಸೇರಿಕೊಂಡ್ರಿ? ನಾನು‌ ನಿಮ್ಮ ಗೆಲ್ಲಿಸೋಕೆ ಏನೇನ್ ಮಾಡಿದೆ. ಉಪಚುನಾವಣೆಯಲ್ಲಿ ಗೆಲ್ಲಿಸೋಕೆ ಏನೇನ್ ಮಾಡಿದ್ದೆ ಅಂತ ಗೊತ್ತಿಲ್ವಾ? ನೀವು ಬೇರೆಯವರ ಅಧಿಕಾರ ಮಾಡಲು ಬಿಡಲ್ಲ. ಜಿಲ್ಲಾ ಪಂಚಾಯತ್ ಅಧಿಕಾರ ೫ ವರ್ಷ ಇದ್ದಿದ್ದು, ೨೦ ತಿಂಗಳು ‌ಇಳಿಸಿದ್ರಿ. ನನಗೆ ಅನ್ಯಾಯ ‌ಮಾಡಿದ್ರಿ‌ ನೀವು ಎಂದು ಚಾಟಿ ಬೀಸಿದರು.

ಓದಿದ್ರೆ ಬ್ರಾಹ್ಮಣರು ಸಹಿಸಲ್ಲ ಅಂದಿದ್ರಿ

ನಾನು ನಾಯಕನೇ. ಸುಮ್ಮನೆ ಏಕವಚನದಲ್ಲಿ ಮಾತನಾಡಬೇಡಿ. ಅವನು ಜವಾನನೇ ಆಗಿರಲಿ, ಗೌರವ ಕೊಡಬೇಕು ನೀವು. ಸುಮ್ಮನೆ ‌ಆರೋಪ‌ ಮಾಡೋದನ್ನು ನಿಲ್ಲಿಸಿ. ಒಳ್ಳೆಯ ಬಟ್ಟೆ ಹಾಕಿದ್ರೆ, ಓದಿದ್ರೆ ಬ್ರಾಹ್ಮಣರು ಸಹಿಸಲ್ಲ ಅಂತ ನೀವು ಹೇಳಿದ್ರಿ. ನೀವು ಯಾರ ತರಹ ಆಗಿದ್ರಿ ಈಗ? ಅಧಿಕಾರ ‌ಮಾಡೋದನ್ನು‌ ಸಹಿಸ್ತೀರಾ ನೀವು?ಸಿದ್ದರಾಮಯ್ಯ ವಿರುದ್ಧ ಜಿಟಿಡಿ ಘರ್ಜಿಸಿದರು.

RELATED ARTICLES

Related Articles

TRENDING ARTICLES