ಕಲಬುರಗಿ : ನಾನು ಬಳೆ ಹಾಕೊಂಡು ಕೂತಿಲ್ಲ.. ಅಖಾಡದಲ್ಲಿ ಎಲ್ಲದಕ್ಕೂ ಸಜ್ಜಾಗಿದ್ದಾನೆ. ಲೋಕಸಭೆಯಲ್ಲಿ ಯಾರೇ ಎದುರಾಳಿ ಆಗಲಿ ಫೈಟ್ ಮಾಡ್ತೇನೆ ಎಂದು ಪ್ರಿಯಾಂಕ್ ಖರ್ಗೆಗೆ ಸಂಸದ ಉಮೇಶ್ ಜಾಧವ್ ಸವಾಲ್ ಹಾಕಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ನ ಯಾರೇ ಅಭ್ಯರ್ಥಿ ಆದ್ರು ಫೈಟ್ ಮಾಡ್ತೇನೆ ಎಂದು ಕುಟುಕಿದರು.
ಪ್ರಿಯಾಂಕ್ ಖರ್ಗೆ ಎಲ್ಲಾ ಲೀಡರ್ಗಳು ನಮ್ಮ ಅಂಡರ್ ಅಲ್ಲಿ ಇರಬೇಕು ಅಂದುಕೊಳ್ಳುತ್ತಾರೆ. ಆದರೆ, ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿರುವುದಕ್ಕೆ ನಮ್ಮ ಮೇಲೆ ಹಿಡಿತ ಸಾಧಿಸೋಕೆ ಆಗ್ತಿಲ್ಲ. ಹಾಗಾಗಿ, ಇವಾಗ ಪ್ರಿಯಾಂಕ್ ಖರ್ಗೆ ಅವರಿಗೆ ರಾಜಕೀಯವಾಗಿ ನಮ್ಮ ಭಯ ಕಾಡ್ತಿದೆ ಎಂದು ಚಾಟಿ ಬೀಸಿದರು.
ಬೈಯೋದೆ ಅಭಿವೃದ್ಧಿನಾ?
ಕೆಡಿಪಿ ಮೀಟಿಂಗ್ನಲ್ಲಿ ಅಧಿಕಾರಿಗಳಿಗೆ ಬೈಯೋದೆ ಅಭಿವೃದ್ಧಿ ಅಂದುಕೊಂಡಿದ್ದಾರೆ. ನಾನು ಸಿದ್ದರಾಮಯ್ಯಗೆ ಗೌರವ ಕೊಡ್ತೇನೆ, ಮಲ್ಲಿಕಾರ್ಜುನ್ ಖರ್ಗೆ ಅವರಿಗೂ ಗೌರವ ಕೊಡ್ತೇನೆ. ಪ್ರಿಯಾಂಕ್ ಖರ್ಗೆ ಅವ್ರೇ.. ನೀವು ಪ್ರಧಾನಿ ಮೋದಿ, ವಾಜಪೇಯಿ ಬಗ್ಗೆ ಮಾತಾಡಿದ ಹಾಗೆ ನಾನು ಮಾತನಾಡೋದಿಲ್ಲ. ನಮಗೆ ಸಂಸ್ಕಾರ ಕಲಿಸಿದ್ದಾರೆ, ಯಾರ ಬಗ್ಗೆ ಹೇಗೆ ಮಾತಾಡಬೇಕು ಅಂತ. ನಾನು ಮನವಿ ಕೋಡುವ ಸಂಸದ ಅಂತ ಹೇಳ್ತಾರೆ. ನಾನು ಮನವಿ ಕೊಟ್ಟಿರೋದ್ರಲ್ಲಿ ಶೇ.80 ಪ್ರತಿಶತ ಕೆಲಸ ಆಗಿದೆ ಎಂದು ಟಾಂಗ್ ಕೊಟ್ಟರು.
ನಿಮಗೆ ಯಾಕೆ ಹೊಟ್ಟೆ ನೋವು?
ಕಾಂಗ್ರೆಸ್ ಸರ್ಕಾರ ಬಂದು 100 ದಿನ ಆದ್ರೂ ವಿರೋಧ ಪಕ್ಷದ ನಾಯಕ ನೇಮಕ ಮಾಡದಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಿಮಗೆ ಯಾಕೆ ಹೊಟ್ಟೆ ನೋವು? ನಮ್ಮ ಪಕ್ಷದಲ್ಲಿರೋದು ಇಂಟರರ್ನಲ್ ವಿಚಾರ ಅದು. ನಾವು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡ್ತೇವೆ ಎಂದು ತಿರುಗೇಟು ಕೊಟ್ಟರು.