ಬೆಂಗಳೂರು : 2024ರ ಚುನಾವಣೆಯಲಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಲು ರಾಜ್ಯದ ಜನತೆ ಕಾಯ್ತಿದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ವೈಫಲ್ಯಗಳಿಂದ ರಾಜ್ಯ ಜನ ಬೇಸತ್ತಿದ್ದಾರೆ ಎಂದು ಕುಟುಕಿದರು.
2014, 2019ರ ಎರಡೂ ಚುನಾವಣೆಗಳು ದೇಶಕ್ಕೆ ಸ್ಥಿರ ಸರ್ಕಾರ ನೀಡಿತ್ತು. 2009ರ ಚುನಾವಣೆಗೆ ಹೋಲಿಕೆ ಮಾಡಿದರೆ ಹೆಚ್ಚು ಮತದಾನ ಆಗಿದೆ. ಪರಿಣಾಮ ಸುಸ್ಥಿರ ಸರ್ಕಾರ ಬಂದಿದೆ. ಈ ಸ್ಥಿರ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿ ನಡೆದಿದೆ ಎಂದರು.
4.5 ಕೋಟಿ ಮನೆಗಳು ನಿರ್ಮಾಣ
ಕಳೆದ 9 ವರ್ಷಗಳಲ್ಲಿ ಮತದಾರ ಮಾಡಿದ ಒಂದು ವೋಟ್ ಇವತ್ತು ದೇಶದಲ್ಲಿ 50 ಕೋಟಿಗೂ ಹೆಚ್ಷು ಜನ್ ಧನ್ ಖಾತೆ ಓಪನ್ ಆಗಿದೆ. ಒಂದು ವೋಟ್ ನಿಂದ 4.5 ಕೋಟಿ ಜನರಿಗೆ ಮನೆಗಳು ನಿರ್ಮಾಣ ಆಗಿವೆ. ಸ್ವಚ್ಛ ಭಾರತ್ ಅಭಿಯಾನ ನಡೆದಿದೆ. ಆಯುಷ್ ಭಾರತ್ ವಿಮೆ ಸಿಕ್ಕಿದೆ ಎಂದು ಮೋದಿಯನ್ನು ಕೊಂಡಾಡಿದರು.
ಭಾರತ ಇವತ್ತು ಚಂದ್ರಯಾನ-3 ಮೂಲಕ ವಿಶ್ವದ ಗಮನ ಸೆಳೆದಿದೆ. ರಾಜ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣೆ ದೃಷ್ಟಿಯಲ್ಲಿ ಅವಶ್ಯ ಎಂದು ತೇಜಸ್ವಿ ಸೂರ್ಯ ತಿಳಿಸಿದರು.