ತುಮಕೂರು : ತುರುವೇಕೆರೆಗೆ ಮಂಜೂರಾಗಿದ್ದ ಮನೆಗಳನ್ನು ಕುಣಿಗಲ್ ಗೆ ವರ್ಗಾಯಿಸಿಕೊಂಡ ಕುಣಿಗಲ್ ಶಾಸಕ ರಂಗನಾಥ್ ವಿರುದ್ದ ಎಂ.ಟಿ ಕೃಷ್ಣಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಘಟನೆ ನಡೆದಿದೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಕುಣಿಗಲ್ ಶಾಸಕ ರಂಗನಾಥ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ತುರುವೇಕೆರೆ ಕರ್ನಾಟಕ ಒಳಗಡೆ ಇಲ್ವಾ? ಅವನ್ಯಾರಿ ಎಂಎಲ್ ಎ ತಾಕತ್ತಿಲ್ವ ಅವನಿಗೆ. ತಾಕತ್ತಿಲ್ವ ಅವನಿಗೆ, ಆಡಳಿತ ಪಕ್ಷದಲ್ಲಿದ್ದು ಮನೆ ತರೋ ಯೋಗ್ಯತೆ ಇಲ್ವಾ. ನಮ್ಮ ಮನೆಗಳನ್ನಾ ಕುಣಿಗಲ್ ಗೆ ಟ್ರಾನ್ಸಫರ್ ಮಾಡಿಸಿದ್ದಾನೆ.
ಇದನ್ನೂ ಓದಿ: ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಆದಿಚುಂಚನಗಿರಿ ಶ್ರೀಗಳು!
ಮಾಜಿ ಶಾಸಕ ಮಸಾಲೆ ಜಯರಾಂ ಅವಧಿಯಲ್ಲಿ ತುರುವೇಕೆರೆಗೆ ಮಂಜೂರಾಗಿದ್ದ 3325 ಮನೆಗಳನ್ನು ಈಗ ನಾನು ಶಾಸಕನಾದ ಮೇಲೆ ಈಗಾಗಲೇ ಮಂಜೂರಾಗಿರುವ ಎಲ್ಲಾ ಮನೆಗಳನ್ನು ಕುಣಿಗಲ್ಗೆ ವರ್ಗಾಯಿಸಿಕೊಂಡಿರುವುದು ಸರಿಯಲ್ಲ, ಇದನ್ನು ಖಂಡಿಸಿ ಇದೇ ಸೆಪ್ಟೆಂಬರ್ 1 ರಂದು ಮನೆ ವಾಪಾಸ್ ಕೊಡುವಂತೆ ಒತ್ತಾಯಿಸಿ ವಸತಿ ಸಚಿವರ ಕಚೇರಿ ಮುಂದೆ ಧರಣಿ ಕೂರುವ ಎಚ್ಚರಿಕೆಯನ್ನು ನೀಡಿದ್ದಾರೆ.
ಅವರದ್ದೇ ಸರ್ಕಾರ ಇರುವಾಗ ಅವರಿಗೆ ಎಷ್ಟಾದ್ರು ಮನೆಗಳನ್ನು ಕೊಡಲಿ, ನಮ್ಮ ಕ್ಷೇತ್ರಕ್ಕೆ ಮಂಜೂರಾಗಿರುವ ನಮ್ಮ ಮನೆಗಳನ್ನ ನಮಗೆ ಕೊಡಿ ಎಂದು ಪ್ರತಿಭಟನೆ ಕೂರಲಾಗುವುದು ಈ ಧರಣಿಗೆ ತುರುವೇಕೆರೆ ಜನತೆ ಸಹ ನನ್ನ ಜೊತೆ ಬನ್ನಿ ಎಂದು ಇದೇ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿಕೊಂಡರು.