ಬೆಂಗಳೂರು : ಕಳೆದ ರಾತ್ರಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಎಚ್ ಡಿಕೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ತೀವ್ರ ನಿಗಾ ಘಟಕದಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
ಗುರುವಾರ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯರು ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ. ಮೂರು ದಿನ ವಾರ್ಡ್ ನಲ್ಲಿ ವೈದ್ಯರು ನಿಗಾ ವಹಿಸಲಿದ್ದಾರೆ.
ಇದನ್ನೂ ಓದಿ: ಗುರು ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ ಚಾಲನೆ!
ನಿನ್ನೆಯಿಂದ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಚ್ ಡಿಕೆ, ಸದ್ಯ ವಾರ್ಡ್ ಗೆ ಶಿಫ್ಟ್ ಆದರೂ ಯಾರನ್ನು ಭೇಟಿ ಮಾಡದಂತೆ ಕುಮಾರಸ್ವಾಮಿ ಗೆ ವೈದರು ಸೂಚನೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ:
ಕಳೆದ ರಾತ್ರಿ 2.30ರ ಸುಮಾರಿಗೆ ಕುಮಾರಸ್ವಾಮಿಗೆ ನಿದ್ರೆಯಿಂದ ಎಚ್ಚರಿಕೆಯಾಗಿದೆ ಈ ವೇಳೆ ಎಡ ಕೈ ಹಾಗೂ ಕಾಲಿನಲ್ಲಿ ನಿಶಕ್ತಿ ಆಗಿರುವ ಅನುಭವಾಗಿದ್ದು ಮಾತು ತೊದಲುವಂತಾಗಿ ಸಮಸ್ಯೆಯ ಅರಿವಾಗಿದೆ ಕೂಡಲೇ ಮನೆಯವರಿಗೆ ಹಾಗೂ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.
ದೂರವಾಣಿ ಮೂಲಕ ಸುಮಾರು 3 ಗಂಟೆಗೆ ಡಾ ಮಂಜುನಾಥರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಅಪೋಲೋ ವೈದ್ಯರಿಗೆ ಮಾಹಿತಿ ರವಾನಿಸಿ ಬೆಳ್ಳಂಬೆಳಗ್ಗೆ 3.40ಕ್ಕೆ ಜಯನಗರ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಆಸ್ಪತ್ರೆಗೆ ಬಂದ ಕೂಡಲೆ ಸಿಟಿ ಸ್ಕ್ಯಾನ್, MRI ಸ್ಕ್ಯಾನ್ ಮಾಡಿ ಅವರಿಗಾಗಿರುವ ಸಮಸ್ಯೆ ಪತ್ತೆಹಚ್ಚಿ ಎಡ ಭಾಗದಲ್ಲಿನ ರಕ್ತನಾಳ ಸಮಸ್ಯೆ ಹಾಗೂ ನಿಶ್ಯಕ್ತಿಗೆ ಚಿಕಿತ್ಸೆ ನೀಡಲಾಗಿದೆ. ಕೇವಲ ಒಂದೇ ಗಂಟೆಯಲ್ಲಿ ಚೇತರಿಸಿಕೊಂಡ ಎಚ್ ಡಿಕೆ ಬೆಳಗ್ಗೆ 5 ಗಂಟೆ ವೇಳೆಗೆ ನಾರ್ಮಲ್ ಸ್ಥತಿಯಲ್ಲಿ ಕಂಡು ಬಂದಿದ್ದು ವೈದ್ಯರೇ ಶಾಕ್ ಆಗಿದ್ದಾರೆ. ಚಿಕಿತ್ಸೆಗೆ ಸಹಕರಿಸಿದ್ದ ಎಚ್ ಡಿಕೆಯವರನ್ನು ತೀವ್ರ ನಿಘಾ ಘಟಕದಿಂದ ಜನರಲ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ.