Sunday, December 22, 2024

ಕೆಂಪೇಗೌಡ ವಿಮಾನ ನಿಲ್ದಾಣ: ಟರ್ಮಿನಲ್​​ 2 ರಲ್ಲಿ ವಿಮಾನ ಹಾರಾಟ ರದ್ದು!

ಬೆಂಗಳೂರು : ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ರಿಂದ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭ ರದ್ದಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಟರ್ಮಿನಲ್-1ರ ಒತ್ತಡ ಕಡಿಮೆ ಮಾಡಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಅಂತಾರಾಷ್ಟ್ರೀಯ ವಿಮಾನಗಳ ಸೇವೆಯನ್ನು ಸಂಪೂರ್ಣವಾಗಿ ಇತ್ತೀಚೆಗೆ ಟರ್ಮಿನಲ್-2ಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತು. ಅಲ್ಲದೆ, ಇಂದಿನಿಂದ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಟರ್ಮಿನಲ್ -2 ರಿಂದ ಕಾರ್ಯಾಚರಣೆ ಗೊಳ್ಳಲಿದ್ದು, ಉಳಿದಂತೆ ದೇಶೀಯ ಸೇವೆಗಳನ್ನು ಎರಡೂ ಟರ್ಮಿನಲ್‌ಗೆ ಹಂಚಿಕೆ ಮಾಡಲಾಗುತ್ತದೆ ಎಂದು ಬಿಐಎಎಲ್‌ ತಿಳಿಸಿತ್ತು.

ಇದನ್ನೂ ಓದಿ: ನೀರಿನಲ್ಲಿ ಮುಳುಗಿ ಇಬ್ಬರೂ ಬಾಲಕಿಯರ ಸಾವು

ಆದರೆ, ತಾಂತ್ರಿಕ ಸಮಸ್ಯೆ ಎದುರಾಗಿರುವ ಕಾರಣದಿಂದಾಗಿ ಗುರುವಾರದಿಂದ ಟರ್ಮಿನಲ್ -2ರಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಹಿಂದಿನಂತೆಯೇ ಟರ್ಮಿನಲ್-1ರಿಂದಲೇ ಎಲ್ಲ ವಿಮಾನ ಕಾರ್ಯಾಚರಣೆ ಮಾಡಲಾಗುವುದು. ಪ್ರಯಾಣಿಕರು ವಿಮಾನ ಸೇವೆಯ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗಳ ಮೂಲಕ ಪಡೆಯಬಹುದು.

RELATED ARTICLES

Related Articles

TRENDING ARTICLES