ಬೆಂಗಳೂರು : ಡಾ.ಬಿ.ಆರ್ ಅಂಬೇಡ್ಕರ್ ಅವರ ಆಶಯ ಈಡೇರಿಸಬೇಕಾಗಿರುವುದು ಸಿಎಂ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಟೌನ್ಹಾಲ್ನಲ್ಲಿ ಡಿ. ದೇವರಾಜ ಅರಸು ಜಯಂತ್ಯೋತ್ಸವ ಅಂಗವಾಗಿ ನಡೆದ ಡಿಎಸ್ಎಸ್ ರಾಜ್ಯ ಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಬೇಡ್ಕರ್ ಸಂವಿಧಾನ ಕೊಡದೆ ಇದ್ರೆ, ನಮಗೆ ಸಮಾಜಿಕ ನ್ಯಾಯ ಸಿಗುತ್ತಿರಲಿಲ್ಲ. ಸಂವಿಧಾನದಿಂದಲೇ ವಿದ್ಯಾವಂತರಾಗಿರೋದು, ಸಂಪತ್ತಿನಲ್ಲೂ ಭಾಗ ಪಡೆಯಲು ಆಗಿದ್ದು. ಆದ್ರೆ, ಇನ್ನೂ ಅದು ಪೂರ್ಣ ಆಗಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ಆಗಿದ್ರು ಇನ್ನೂ ಪೂರ್ಣ ಆಗಿಲ್ಲ. ರಚನ ಸಮಿತಿ ಅಧ್ಯಕ್ಷರು ಆಗದೆ ಇದ್ರೆ ಇಂತಹ ಸಂವಿಧಾನ ಸಿಗುತ್ತಿರಲಿಲ್ಲ. ಸಂವಿಧಾನ ಅಡಿ ಕೆಲಸ ಮಾಡುವುದು ನಮ್ಮ ಕರ್ತವ್ಯ. ಇದನ್ನು ದೇವರಾಜ ಅರಸು ಅವರು ನಿರ್ವಹಿಸಿದ್ರು ಎಂದರು.
ರಾಜ್ಯ ಕಂಡ ಅಪ್ರತಿಮ ಸಿಎಂ
ದೇವರಾಜ ಅರಸು ಅವರು ಈ ರಾಜ್ಯ ಕಂಡ ಅಪ್ರತಿಮ ಸಿಎಂ. ಅವರನ್ನು ಸಾಮಾಜಿಕ ಹರಿಕಾರರು ಅಂತ ಕರೆಯುತ್ತೇವೆ. ಅವರು ಅಧಿಕಾರದಲ್ಲಿ ಇದ್ದಾಗ ಬಡವರು, ಶೋಷಿತ ವರ್ಗದ ಜನರಿಗೆ ನ್ಯಾಯ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅರಸು ಅವರು ಸಂವಿಧಾನ ಆಶಯ ಈಡೇರಿಸುವ ಪ್ರಯತ್ನ ಮಾಡಿದ್ರು, ಅದು ಅವರ ಆಡಳಿತದಲ್ಲಿ ನೋಡಬಹುದು ಎಂದು ಹೇಳಿದರು.
ಇದನ್ನೂ ಓದಿ : ಮೋದಿ ಗೆಲ್ಲಿಸಲು ಜನ ಕಾಯ್ತಿದಾರೆ : ತೇಜಸ್ವಿ ಸೂರ್ಯ
ರಾಜಕೀಯ ಸ್ವಾತಂತ್ರ್ಯ ಸಿಕ್ಕಿದ್ರೆ ಸಾಲದು
ಬಡವರ ಶಕ್ತಿ ತುಂಬು ಕೆಲಸ ಅರಸು ಅವರು ಮಾಡಿದ್ರು. ನಮಗೆ ಸ್ವಾತಂತ್ರ್ಯ ಬಂದಿದೆ, ಅದು ಎಲ್ಲರಿಗೂ ಸಿಗಬೇಕು. ಯಾವುದೇ ವರ್ಗಕ್ಕೆ ಸೇರಿದ್ರು ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದ್ರೆ ಸಾಲದು. ಅದು ಸಾಮಾಜಿಕ ತಳಹದಿ ಮೇಲೆ ನಿಲ್ಲಬೇಕು ಅಂತ ಅಂಬೇಡ್ಕರ್ ಹೇಳಿದ್ರು ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ವೇಳೆ ಸಚಿವ ಸತೀಶ್ ಜಾರಕಿಹೊಳಿ, ದಸಂಸ ಮುಖಂಡ ಡಿ.ಜಿ. ಸಾಗರ್ ಸೇರಿ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಜಯಂತೋತ್ಸವ ಮತ್ತು ರಾಜ್ಯ ಮಟ್ಟದ ಸಮಾವೇಶವನ್ನು ಮುಖ್ಯಮಂತ್ರಿ @siddaramaiah ಅವರು ಉದ್ಘಾಟಿಸಿದರು. ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ದಸಂಸ ಮುಖಂಡ ಡಿ.ಜಿ.ಸಾಗರ್ ಸೇರಿ ಸಂಘಟನೆಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. pic.twitter.com/5Jnsgd82pp
— CM of Karnataka (@CMofKarnataka) August 31, 2023