Wednesday, January 22, 2025

ನಾಳೆ ಮೊದಲ ವಿಮಾನ ಹಾರಾಟ ಆರಂಭ ; ನಿಲ್ದಾಣದಲ್ಲಿ ಸಕಲ ಸಿದ್ಧತೆ

ಶಿವಮೊಗ್ಗ : ನಾಳೆ ಮೊದಲ ವಿಮಾನ ಹಾರಾಟ ಆರಂಭದ ಹಿನ್ನೆಲೆ ಸಿಂಗಾರಗೊಳ್ಳುತ್ತಿರುವ ವಿಮಾನ ನಿಲ್ದಾಣ.

ಜಿಲ್ಲೆಯಲ್ಲಿ ನಾಳೆ ಇಳಿಯಲಿರುವ ಮೊದಲ ವಿಮಾನಕ್ಕೆ ವಾಟರ್ ಸೆಲ್ಯೂಟ್​ಗೆ ತಯಾರಿ ನಡೆಯುತ್ತಿದೆ. ಬಣ್ಣಬಣ್ಣದ ಬಟ್ಟೆ ಹಾಗೂ ಹೂಗಳಿಂದ ವಿಮಾನ ನಿಲ್ದಾಣ ಮದುವಣಗಿತ್ತಿಯ ರೀತಿಯಲ್ಲಿ ಸಿಂಗಾರಗೊಳ್ಳುತ್ತಿದೆ.

ಇದನ್ನು ಓದಿ : ಆತ್ಮಹತ್ಯೆಗೆ ಶರಣಾದ ಮಹಿಳಾ ಅರಣ್ಯ ಅಧಿಕಾರಿ

ಅಷ್ಟೇ ಅಲ್ಲದೆ ಟರ್ಮಿನಲ್ ಕಟ್ಟಡದೊಳಗೆ ಕಾರ್ಯಕ್ರಮ ನಡೆಯುತ್ತಿದ್ದು, ಆಸನಗಳನ್ನು ಜೋಡಿಸುತ್ತಿರುವ ಕಾರ್ಮಿಕರು. ವಿಮಾನ ಇಳಿಯುತ್ತಿದ್ದಂತೆ ವಾಟರ್ ಸೆಲ್ಯೂಟ್​ಗಾಗಿ ಎರಡು ಫೈರ್ ಎಂಜಿನ್ ವಾಹನಗಳನ್ನು ಕರೆಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಮೊದಲ ವಿಮಾನದಿಂದ ಸಚಿವ ಎಂ.ಬಿ. ಪಾಟೀಲ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಮತ್ತಿತರ ಗಣ್ಯರು ಭಾಗಿಯಾಗಲಿದ್ದಾರೆ.

RELATED ARTICLES

Related Articles

TRENDING ARTICLES