ಆನೇಕಲ್ : ತಮಗೆ ಅವಮಾನ ಆಗಿದೆ ಎಂಬ ಆರೋಪದ ಹಿನ್ನೆಲೆ ಕಪ್ಪು ಬಾವುಟ ಹಾರಿಸುತ್ತ ಮೌನವಾಗಿ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರು ಘಟನೆ ಜಿಲ್ಲೆಯ ಮಂಟಪ ಪಂಚಾಯತಿ ಬಳಿ ನಡೆದಿದೆ.
ಒಂದಡೆ ಗೃಹ ಲಕ್ಷ್ಮೀ ಯೋಜನೆಗೆ ಉದ್ಘಾಟನೆ ನಡೆಯುತ್ತಿದೆ. ಮತ್ತೊಂದೆಡೆ ಮಹಿಳೆಯರ ಮೌನ ಪ್ರತಿಭಟನೆ ನಡೆಯುತ್ತಿದೆ. ಕಳೆದ ವಾರ ಸಂಘದ ಮೀಟಿಂಗ್ಗೆಂದು ಪಂಚಾಯಿತಿ ಬಳಿ ಬಂದಿದ್ದ ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು. ಈ ವೇಳೆ ಪಂಚಾಯಿತಿ ಅಧ್ಯಕ್ಷರಿಂದ ಮೀಟಿಂಗ್ ಸ್ಥಳ ನೀಡಲು ಗಲಾಟೆ ಮಾಡಿದ್ದರು.
ಇದನ್ನು ಓದಿ : ರಕ್ಷಾ ಬಂಧನ ಆಚರಿಸಿಕೊಂಡ ಲಕ್ಷ್ಮಿ ಹೆಬ್ಬಾಳ್ಕರ್
ಬಳಿಕ ಮಹಿಳೆಯರನ್ನು ಅಲ್ಲಿ ಸೇರಿದ್ದ ಅಧ್ಯಕ್ಷರು ಅವಮಾನಿಸಿ ಕಳುಹಿಸಿದ್ದಾರೆ. ಈ ಹಿನ್ನೆಲೆ ಗೃಹಲಕ್ಷ್ಮೀ ಯೋಜನೆ ಚಾಲನೆ ದಿನವೇ ತಮಗೆ ಅವಮಾನವಾಗಿದೆ ಎಂದು ಆರೋಪಿಸಿ, ಕಪ್ಪು ಬಾವುಟವನ್ನು ಇಟ್ಟು ಹಾಗೂ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆನೇಕಲ್ನ ಮಂಟಪ ಪಂಚಾಯಿತಿ ಬಳಿ ಸ್ತ್ರೀ ಶಕ್ತಿ ಗುಂಪುಗಳ ಮಹಿಳೆಯರು ಮೌನವಾಗಿ ಇದ್ದುಕೊಂಡು ಪ್ರತಿಭಟನೆ ಮಾಡಿದರು.