Wednesday, January 22, 2025

ಖ್ಯಾತ ಸಂಗೀತ ನಿರ್ದೇಶಕನಿಗೆ ಅಭಿನಂದಿಸಿದ ಕೆ.ಗೋಪಾಲಯ್ಯ

ಬೆಂಗಳೂರು  : ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ನಾಡಿನ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಅವರು ಆಯ್ಕೆಯಾದ ಹಿನ್ನೆಲೆ ಅಭಿನಂದನೆ ಸಲ್ಲಿಸಿದ ಶಾಸಕ ಕೆ. ಗೋಪಾಲಯ್ಯರವರು.

ಈ ಭಾರಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ನಡೆಯಲಿದ್ದು, ನಾಡಿನ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆ ಇಂದು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಗೋಪಾಲಯ್ಯನವರು ಹಂಸಲೇಖ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದರು.

ಇದನ್ನು ಓದಿ : ರಾಹುಲ್ ಗಾಂಧಿ ಯಾರಿಗೂ ಹೆದರಲ್ಲ : ಮಲ್ಲಿಕಾರ್ಜುನ ಖರ್ಗೆ

ಬಳಿಕ ಗೋಪಾಲಯ್ಯನವರು ಮಾತನಾಡಿದ್ದು,  ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿ ಪಡೆದಿರುವ ಮೈಸೂರಿನಲ್ಲಿ, ಈ ಭಾರಿ ನಡೆಯಲಿರುವ ನಾಡಹಬ್ಬದ ಉದ್ಘಾಟನೆಗೆ ನಿಮ್ಮನ್ನು ಆಯ್ಕೆ ಮಾಡಿರುವುದು ನಮ್ಮೆಲ್ಲರಿಗೂ ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಾಜಿ ಉಪಮೇಯರ್ ಎಸ್. ಹರೀಶ್, ವೆಂಕಟೇಶ್ ಹಾಗೂ ಶ್ರೀನಿವಾಸ್ ಎಲ್ಲಾರು ಹಾಜರ ಇದ್ದು, ಹಂಸಲೇಖ ಅವರಿಗೆ ಶುಭಕೋರಿ ಹಾರೈಸಿದರು.

RELATED ARTICLES

Related Articles

TRENDING ARTICLES