Sunday, January 19, 2025

ಪ್ರೀತಿಯಿಂದ ಹರಸಿದ ಎಲ್ಲರಿಗೂ ಥ್ಯಾಂಕ್ಸ್ : ನಟ ದರ್ಶನ್

ಬೆಂಗಳೂರು : ಇಂದು ಎಲ್ಲೆಡೆ ರಕ್ಷಾ ಬಂಧನದ ಸಂಭ್ರಮ. ನಟ ದರ್ಶನ್ ತೂಗುದೀಪ ಅವರ ಮನೆಯಲ್ಲೂ ರಾಖಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಪ್ರತಿ ವರ್ಷದಂತೆ ಈ ಬಾರಿಯೂ ಮುಂಜಾನೆಯೇ ಸಹೋದರಿಯರು ನಟ ದರ್ಶನ್ ಮನೆಗೆ ಆಗಮಿಸಿ, ರಾಖಿ ಕಟ್ಟುವ ಮೂಲಕ ಶುಭ ಕೋರಿದರು. ಪ್ರತಿಯಾಗಿ ಕೊಡುಗೈ ದಾನಿಯಾಗಿರುವ ದಾಸ ಪ್ರೀತಿಯ ಸಹೋದರಿಯರಿಗೆ ಉಡುಗೊರೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ನಟ ದರ್ಶನ್, ‘ಪ್ರೀತಿಯಿಂದ ಬಂದು ಹರಸಿದ ಹಾಗೂ ಎಲ್ಲಾ ನನ್ನ ಅಕ್ಕತಂಗಿಯರಿಗೆ ರಕ್ಷಾ ಬಂಧನ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ರಕ್ಷಾ ಬಂಧನ ಅಣ್ಣ-ತಂಗಿ, ಸಹೋದರ-ಸಹೋದರಿ ಭ್ರಾತೃತ್ವದ ಸಂಕೇತ. ಸಹೋದರಿಯರಿಗೆ ಸಹೋದರರು ನೀಡುವ ರಕ್ಷಣೆಯನ್ನು ಪ್ರತಿಬಿಂಬಿಸುವ ಆಚರಣೆ ಇದಾಗಿದೆ. ಇಂದು ದೇಶಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗಿದೆ.

RELATED ARTICLES

Related Articles

TRENDING ARTICLES