Sunday, December 22, 2024

ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ

ಶಿವಮೊಗ್ಗ : ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರಾಪಾಯಿ ವಂಚನೆ ಮಾಡಿರುವ ಘಟನೆ ರಿಪ್ಪನ್​ಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಿಪ್ಪನ್ ಪೇಟೆಯ ಶ್ವೇತಾ ರಿಶಾಂತ್ ಮತ್ತು ವಿಜಯಪುರದ ಪ್ರಶಾಂತ್ ದೇಶಪಾಂಡೆ ಇಬ್ಬರು ಆರೋಪಿಗಳು. ಈ ಇಬ್ಬರು ವ್ಯಕ್ತಿಗಳು ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಜನರಿಗೆ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ.

ಇದನ್ನು ಓದಿ : ಗೃಹಲಕ್ಷ್ಮೀ ಚಾಲನೆ ಬೆನ್ನಲ್ಲೇ ‌ಮಹಿಳೆಯರ ಮೌನ ಪ್ರತಿಭಟನೆ

ಈ ವಂಚನೆಯಲ್ಲಿ ತೀರ್ಥಹಳ್ಳಿಯ ಅರ್ಜುನ್ ಅವರಿಗೆ 4.02 ಲಕ್ಷ ರೂ, ಕೊಪ್ಪ ತಾಲೂಕಿನ ಆದರ್ಶ ಎಂಬುವವರಿಗೆ 6.50 ಲಕ್ಷ ರೂ ಹಾಗೂ ಶಿವಮೊಗ್ಗದ ನವೀನ್ ಎಂಬುವವರಿಂದ 3,42,500 ರೂ. ತೆಗೆದುಕೊಂಡು ವಂಚನೆ ಮಾಡಿದ್ದಾರೆ.

ಈ ಘಟನಾ ಸಂಬಂಧ ವಂಚನೆ ಒಳಗಾದ ಅರ್ಜುನ್ ಟಿ.ಪಿ ಅವರು ಮಹಿಳೆ ಸೇರಿದಂತೆ ಇಬ್ಬರ ವಿರುದ್ದ ದೂರು ದಾಖಲಿಸಿದ್ದಾರೆ. ದೂರಿನ ಉಲ್ಲೇಖದಲ್ಲಿ ಇನ್ನೂ ಮೂವರಿಗೆ ವಂಚನೆ ಮಾಡಿರುವ ಶಂಕೆಯಿದೆ. ಸದ್ಯ ಐಪಿಸಿ ಸೆಕ್ಷನ್ 406,420 ಮತ್ತು 506 ರ ಅಡಿಯಲ್ಲಿ ರಿಪ್ಪನ್​ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES