ಬೆಂಗಳೂರು : ಇಂಡೋ-ಪಾಕ್ (India Vs Pakistan) ಕದನ ಅಂದ್ರೆ ಅದರ ಕ್ರೇಜ್ ಬೇರೆ ಲೆವೆಲ್ನಲ್ಲೇ ಇರುತ್ತದೆ. ಇದಕ್ಕೆ ಟಿಕೆಟ್ ಸೋಲ್ಡ್ ಔಟ್ (Ticket Sold Out) ಆಗಿರುವುದೇ ಸಾಕ್ಷಿ.
ಏಷ್ಯಾಕಪ್ (AsiaCup 2023) ಬಳಿಕ ಭಾರತ ಹಾಗೂ ಪಾಕ್ ತಂಡಗಳು ವಿಶ್ವಕಪ್ನಲ್ಲಿ (World Cup 2023) ಕಾದಾಡಲಿವೆ. ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ (Narendra Modi) ಮೈದಾನದಲ್ಲಿ ಪಂದ್ಯ ನಡೆಯಲಿದೆ.
ಈ ಬದ್ಧವೈರಿಗಳ ಕಾಳಗವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಎಲ್ಲಾ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಮತ್ತೊಂದೆಡೆ, ವಿಶ್ವಕಪ್ ಟಿಕೆಟ್ಗಳ ಮಾರಾಟದ ಹೊಣೆ ಹೊತ್ತಿದ್ದ ಬುಕ್ ಮೈ ಶೋ ಕಂಪನಿಯ ಕಳಪೆ ಸೇವೆಯಿಂದಾಗಿ ಕ್ರಿಕೆಟ್ ಅಭಿಮಾನಿಗಳು ಈ ಕಂಪನಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಆಗಸ್ಟ್ 29ರ ಸಂಜೆ 6 ಗಂಟೆಗೆ ಪಂದ್ಯದ ಟಿಕೆಟ್ ಮಾರಾಟ ಆರಂಭಿಸುವುದಾಗಿ ಬುಕ್ ಮೈ ಶೋ ನಿರ್ದೇಶನ ನೀಡಿತ್ತು.
ಬುಕ್ ಮೈ ಶೋ ವಿರುದ್ಧ ಆಕ್ರೋಶ
ಹೀಗಾಗಿ, ಅಭಿಮಾನಿಗಳು ಕಾದುಕುಳಿತ್ತಿದ್ದರು. ಆದರೆ, ಟಿಕೆಟ್ ಮಾರಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಪಂದ್ಯದ ಎಲ್ಲಾ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಈ ನಡುವೆ ಟಿಕೆಟ್ ಖರೀದಿಗಾಗಿ ಗಂಟೆಗಟ್ಟಲೆ ಕಾದು ಕುಳಿತರೂ ಟಿಕೆಟ್ ಖರೀದಿಸಲು ಸಾಧ್ಯವಾಗದ ಕಾರಣ ಅಭಿಮಾನಿಗಳು ಬುಕ್ ಮೈ ಶೋ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಸೆ.2ಕ್ಕೆ ಇಂಡೋ-ಪಾಕ್ ಕಾಳಗ
2023ರ ಏಷ್ಯಾಕಪ್ ಇಂದಿನಿಂದ ಆರಂಭವಾಗುತ್ತಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗುತ್ತಿವೆ. ಆದರೆ, ಏಷ್ಯಾಕಪ್ಗೆ ನಿಜವಾಗಿ ಕಳೆಗಟ್ಟುವುದು ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಕದನದಿಂದ. ಈ ಉಭಯ ತಂಡಗಳು ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿ ಮೈದನಾದಲ್ಲಿ ಮುಖಾಮುಖಿಯಾಗಲಿವೆ.