ಬೆಂಗಳೂರು : ರಾತ್ರೋ ರಾತ್ರಿ ಪುರಾತನ ಆಂಜನೇಯ ಮೂರ್ತಿಯನ್ನು ಪೊಲೀಸರು ಮತ್ತು ಮೆಟ್ರೋ ಸಿಬ್ಬಂದಿ ತೆರೆವುಗೊಳಿಸಿ ಹೊತ್ತೊಯ್ದಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸೂರು ರಸ್ತೆಯ ಹೆಬ್ಬಗೋಡಿ ಪೊಲೀಸ್ ಠಾಣೆ ಬಳಿಯಿದ್ದ ಪುರಾತನ ಕಾಲದ ಆಂಜನೇಯ ದೇವಾಲಯವನ್ನು BMRCL ನವರು ಪೊಲೀಸರ ರಕ್ಷಣೆ ಪಡೆದು ಕಳ್ಳರಂತೆ ರಾತ್ರಿ 1ಗಂಟೆ ನಂತರ ತೆರೆವು ಗೊಳಿಸಿ ದೇವಾಲಯದಲ್ಲಿದ್ದ ಮೂರ್ತಿಗಳನ್ನು ಹೊತ್ತೊಯ್ದಿದ್ದಾರೆ ಅಧಿಕಾರಿಗಳ ಈ ನಡೆಗೆ ಬಾರಿ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ಬಾಲಕನಿಗೆ ಒಂದೇ ಹಾವಿನಿಂದ 9 ಬಾರಿ ಕಡಿತ: ಆಸ್ಪತ್ರೆಗೆ ದಾಖಲು
ಈ ಹಿಂದೆ ಇದ್ದ ಆಂಜನೇಯ ದೇವಾಲಯದ ಸ್ಥಳದಲ್ಲೇ ಇತ್ತೀಚೆಗೆ ದೇವಾಲಯವನ್ನು ಗ್ರಾಮಸ್ಥರು ಪುನರ್ ನಿರ್ಮಿಸಿದ್ದರು, ಈ ಜಾಗವನ್ನು ಯಾವುದೇ ಪರಿಹಾರ ಪಡೆಯದೇ ಮೇಟ್ರೋಗೆ ಬಿಟ್ಟು ಕೊಟ್ಟಿದ್ದ ಸ್ಥಳದಲ್ಲೇ ಗ್ರಾಮಸ್ಥರು ಚಿಕ್ಕದಾಗಿ ಶೆಡ್ ನಿರ್ಮಿಸಿದ್ದರು ಸೋಮವಾರ ರಾತ್ರೋರಾತ್ರಿ ಶೆಡ್ ತೆರೆವುಗೊಳಿಸಿ ದೇವಾಲಯದಲ್ಲಿದ್ದ ಮೂರ್ತಿಗಳನ್ನ ಪೊಲೀಸರು ಮತ್ತು ಮೇಟ್ರೋ ಸಿಬ್ಬಂದಿ ಹೊತ್ತೊಯ್ದಿದ್ದಾರೆ ಈ ಕೃತ್ಯಕ್ಕೆ ಇಲ್ಲಿನ ಸ್ಥಳೀಯರು ಭಾರಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.