ಬೆಂಗಳೂರು : ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಡುಗೆ ಅನಿಲ(ಎಲ್ಪಿಜಿ ಸಿಲಿಂಡರ್ ಬೆಲೆ) ಬೆಲೆಯಲ್ಲಿ 200 ರೂ. ಕಡಿಮೆ ಮಾಡಿದೆ.
ಈ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನೂ ಇಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಂಬರುವ ಸಂಸತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ದೇಶದ ರೈತರಿಗೂ ಗಿಫ್ಟ್ ನೀಡುವ ಸಾಧ್ಯತೆಯಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ನಗದು ಸಹಾಯಧನವನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ಯಾವುದೇ ಕಾರಣಕ್ಕೂ ಬೆಲೆ ಏರಿಕೆ ವಿಷಯ ಅಸ್ತ್ರವಾಗಬಾರದು ಎಂದು ಪ್ರಧಾನಿ ಮೋದಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. ಹೀಗಾಗಿಯೇ, ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.
ಪ್ರಸ್ತುತ ಇಂಧನ ದರ
ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ 96.72 ರೂ. ಡೀಸೆಲ್ ದರ 89.62 ರೂ. ಇದೆ. ಬೆಂಗಳೂರಲ್ಲಿ ಪೆಟ್ರೋಲ್ ದರ 101.94 ರೂ. ಡೀಸೆಲ್ ದರ 87.89 ರೂ. ಇದೆ. ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ 102.77 ರೂ., 106.31 ರೂ., 106.03 ರೂ. ಆಗಿದ್ದರೆ, ಡೀಸೆಲ್ ದರಗಳು ಕ್ರಮವಾಗಿ 94.37 ರೂ., 94.27 ರೂ., 92.76 ರೂ. ಇದೆ.