Sunday, January 5, 2025

ಗ್ಯಾರೆಂಟಿ ಯೋಜನೆ ಜಾರಿ : ಇಂದು ಚಾಮುಂಡಿ ಬೆಟ್ಟದಲ್ಲಿ ಸಿದ್ದು, ಡಿಕೆಶಿ ವಿಶೇಷ ಪೂಜೆ

ಬೆಂಗಳೂರು :ಕಾಂಗ್ರೆಸ್​ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ನಾಳೆ ಚಾಲನೆ ದೊರೆಯಲಿದ್ದು ಈ ಹಿನ್ನೆಲೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಡ ದೇವತೆ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ : ಜಪಾನ್ ಚಂದ್ರಯಾನ ಉಡ್ಡಯನ “ಮೂನ್​​ ಸ್ನೈಪರ್​​”  ಮತ್ತೆ ಮುಂದಕ್ಕೆ

ವಿಧಾನಸಭೆ ಚುನಾವಣೆಗೆ ಮೊದಲು ಮೇ 9ರಂದು ಗ್ಯಾರಂಟಿಗಳ ಈಡೇರಿಕೆಗೆ ಶಕ್ತಿ ನೀಡುವಂತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆ.ಜೆ.ಜಾರ್ಜ್, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಅವರು ಪೂಜೆ ಸಲ್ಲಿಸಿದ್ದರು. ಸರ್ಕಾರ ಅಧಿಕಾರಕ್ಕೆ ಗ್ಯಾರಂಟಿಗಳ ಈಡೇರಿಸುವುದಾಗಿ ಗ್ಯಾರಂಟಿ ಪತ್ರವನ್ನು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಇಟ್ಟು ಸಿದ್ದರಾಮಯ್ಯ, ಪ್ರಮಾಣ ಮಾಡಿದ್ದರು. ಡಿ.ಕೆ.ಶಿವಕುಮಾ‌

ಇದೀಗ ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವತ್ತ ಹೆಜ್ಜೆ ಹಾಕಿದೆ. ಹೀಗಾಗಿ ಶಕ್ತಿ ನೀಡಿದ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲು ಇಂದು ಬೆಳಗ್ಗೆ 9 ಗಂಟೆಗೆ ತೆರಳಲಿದ್ದಾರೆ. ಚುನಾವಣೆಗೆ ಮೊದಲು ನಾನು ಹಾಗೂ ಸಿದ್ದರಾಮಯ್ಯ ಗ್ಯಾರೆಂಟಿ ಈಡೇರಿಕೆಗೆ ಶಕ್ತಿ ನೀಡುವಂತೆ ಗ್ಯಾರೆಂಟಿ ಪ್ರಾರ್ಥನೆ ಮಾಡಿದ್ದೆವು. ತಾಯಿಯ ಆಶೀರ್ವಾದದಿಂದ ಗ್ಯಾರಂಟಿ ಜಾರಿ ಮಾಡು ತ್ತಿದ್ದೇವೆ. ಇದಕ್ಕೆ ಮೊದಲು ಚಾಮುಂಡಿ ಆಶೀರ್ವಾದ ಪಡೆಯುತ್ತೇವೆ’ ಎಂದರು.

RELATED ARTICLES

Related Articles

TRENDING ARTICLES