Wednesday, January 22, 2025

ಹಿಂಡಲಗ ಜೈಲು ಕರ್ಮಕಾಂಡ ವೀಡಿಯೋ ಲೀಕ್​: ಕೈದಿಗಳ ವಿರುದ್ದ ದೂರು ದಾಖಲು

ಬೆಳಗಾವಿ :  ಹಿಂಡಲಗಾ ಜೈಲಿನಲ್ಲಿನ ಕರ್ಮಕಾಂಡ ವೀಡಿಯೋ ಮಾಧ್ಯಮಗಳಿಗೆ ನೀಡಿದ ಕೈದಿಗಳ ವಿರುದ್ಧವೇ ಕೇಸ್ ದಾಖಲಿಸಿರುವ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಹಿಂಡಲಗಾ ಜೈಲಿನ ಪ್ರಭಾರ ಮುಖ್ಯ ಅಧೀಕ್ಷಕ ವಿ.ಕೃಷ್ಣಮೂರ್ತಿಯಿಂದ ವಿವಿಧ ಪ್ರಕರಣದ ಭಾಗಿಯಾಗಿದ್ದ ವಿಚಾರಣಾಧೀನ ಕೈದಿಗಳಾದ ಕುಣಿಗಲ್ ಮೂಲದ ಸಾಯಿಕುಮಾರ್ (30), ವಿಜಯಪುರದ ಅಬುಬಕರ್ ಹಸನ ಕಾಟೆ(30), ಚಿಕ್ಕೋಡಿಯ ರಾಹುಲ್ ಘಾಟಗೆ (28) ವಿರುದ್ದ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ರಾತ್ರೋ ರಾತ್ರಿ ದೇವಾಲಯದ ಆಂಜನೇಯ ಮೂರ್ತಿ ತೆರವು : ಸ್ಥಳೀಯರು ಆಕ್ರೋಶ  

ಜೈಲು ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೈದಿಗಳ ಮೇಲೆ ಹಾಕಿದ್ರಾ ಕೇಸ್?

ಮೊಬೈಲ್ ನಿಷೇಧವಿದ್ದರೂ ಮೊಬೈಲ್ನಲ್ಲಿ  ಮಾತನಾಡಿದ್ದ ವೀಡಿಯೋ ಚಿತ್ರೀಕರಿಸಿ ಜೈಲಿನ ಕರ್ಮಕಾಂಡ ವಿಡಿಯೋವನ್ನು ಮಾದ್ಯಮದವರಿಗೆ ನೀಡಿದ್ದಕ್ಕೆ ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಈಗಾಗಲೇ ಮಾದ್ಯಮಕ್ಕೆ ನೀಡಲಾಗಿದೆ ಎನ್ನುವ ವೀಡಿಯೋವು 2023 ರ ಮೇ 25 ಕ್ಕಿಂತ ಮೊದಲೇ ವಿಡಿಯೋ ಮಾಡಿ ಈಗ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ಸದ್ಯ ಕೇಳಿಬಂದಿದೆ.

RELATED ARTICLES

Related Articles

TRENDING ARTICLES